ಸ್ಟೇಟಸ್ ಕತೆಗಳು (ಭಾಗ ೧೩೨೮) - ನಮ್ಮನೆ ದೇವರು…

ಅಯ್ಯೋ ಮಗು ನೀನು ಯಾಕೆ ಹೆದರ್ತಾ ಇದ್ದೀಯಾ? ನೀನು ಮಾಡುತ್ತಿರುವ ವಿಧಾನಗಳೆಲ್ಲವೂ ಸರಿ ಇದೆ ನಿನ್ನ ಹಿರಿಯರು ಹಾಕಿ ಕೊಟ್ಟ ದಾರಿಯಲ್ಲಿ ನೀನು ಮುಂದುವರಿತಾ ಇದ್ದೀಯಾ? ಈಗ ನಿನ್ನ ಸುತ್ತಮುತ್ತ ಸೇರಿದವರು ಅವರು ಹೊರಗೆಲ್ಲೋ ನೋಡಿದ ವಿಚಾರವನ್ನ ನಿನ್ನ ತಲೆ ಒಳಗೆ ತುಂಬುತ್ತಿದ್ದಾರೆ ,ಹೊರಗಿನ ವಿಚಾರಗಳನ್ನು ಅವರ ಕಣ್ಣಿನ ಮೂಲಕ ನೋಡ್ತಾ ಇದ್ದಾರೆ. ಹಾಗಾಗಿ ಅವರು ಸರಿ ತಪ್ಪುಗಳನ್ನು ತಿಳಿಸುತ್ತಿದ್ದಾರೆ .ನೀನು ನನ್ನ ನಂಬಿದವ ನಾನು ನಿನಗೆ ಬೆಂಗಾವಲಾಗಿ ನಿಂತವ. ನಮ್ಮಿಬ್ಬರ ಬಾಂಧವ್ಯ ನಮ್ಮ ನಡುವೆ ಇದೆ. ನೀ ಮಾಡಿರುವ ಎಲ್ಲ ವಿಧಾನಗಳನ್ನು ನಾನು ಒಪ್ಪಿಕೊಳ್ಳುತ್ತೇನೆ ಮತ್ತು ಅದನ್ನೇ ಇಷ್ಟ ಪಡ್ತೇನೆ .ನಾನು ಯಾವತ್ತೂ ನಿನಗೆ ಕೆಡುಕಾಗುವ ಹಾಗೆ ಮಾಡುವವನಲ್ಲ. ಅದನ್ನ ಬಯಸುವವನು ಅಲ್ಲ. ಸದಾ ಜೊತೆಗಿರುತ್ತೇನೆ ನಂಬಿಕೆಯಿಂದ ಕೈ ಮುಗಿ. ಖಂಡಿತ ಒಳ್ಳೆಯದಾಗುತ್ತೆ. ಹೀಗಂದ ಮನೆದೇವರು ಹರಸಿ ಪೀಠದಲ್ಲಿ ಕುಳಿತುಕೊಂಡುಬಿಟ್ರು. ಆದರೆ ಹೊರಗಡೆ ಆಡುವ ಮಾತುಗಳು ನಂಬಿದವರ ವಿಚಾರಗಳಿಗೆ ಸಣ್ಣದಾಗಿ ಕೆಲಸ ಕೊಡುವುದಕ್ಕೆ ಶುರುಮಾಡಿದವು.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ