ಸ್ಟೇಟಸ್ ಕತೆಗಳು (ಭಾಗ ೧೩೨೯) - ಅಮ್ಮನ ಮಾತು

ಸ್ಟೇಟಸ್ ಕತೆಗಳು (ಭಾಗ ೧೩೨೯) - ಅಮ್ಮನ ಮಾತು

ಮಗಳೇ ಸರಿಯಾಗಿ ಅರ್ಥ ಮಾಡ್ಕೋ, ನಿನಗೆ ನಾನು ಹೇಳುವುದು ಸರಿಯಲ್ಲ ಅಂತ ಅನ್ನಿಸಬಹುದು ಆದರೆ ಅರ್ಥ ಮಾಡಿಕೊಂಡರೆ ಅದು ಸರಿ ಅಂತಾನೂ ನಿನಗೆ ಅನ್ನಿಸುತ್ತದೆ. ನೀನು ಈಗ ಧರಿಸುವ ಬಟ್ಟೆಯ ಬಗ್ಗೆ ನನಗೆ ಯಾವುದೇ ತಕರಾರಿಲ್ಲ .ಆದರೆ ನಿನಗೆ ಈ ಬಟ್ಟೆಯನ್ನು ಧರಿಸುವುದಕ್ಕೆ ಎಲ್ಲಿಂದ ಪ್ರೇರೇಪಣೆ ಸಿಗುತ್ತದೆ ಅಲ್ವಾ ಆ ಪ್ರೇಮ ನೀಡುವವರು ಅದನ್ನ ವ್ಯರ್ಥವಾಗಿ ಮಾಡುತ್ತಿಲ್ಲ ಅವರಿಗೆ ಆ ತರಹ ಬಟ್ಟೆ  ಧರಿಸುವುದಕ್ಕೆಂತಲೇ ದುಡ್ಡು ನೀಡುವವರಿದ್ದಾರೆ. ಕಡಿಮೆ ಬಟ್ಟೆ ಧರಿಸಿದಷ್ಟು ಹೆಚ್ಚು ದುಡ್ಡು ನೀಡುವ ದೊಡ್ಡ ದೊಡ್ಡ ಸಂಸ್ಥೆಗಳು ಅವರ ಬೆನ್ನಿಗಿವೆ. ಆ ಕಾರಣಕ್ಕೆ ಅವರು ಬೇರೆ ಬೇರೆ ತರಹದ ಬಟ್ಟೆಗಳನ್ನು ಧರಿಸುತ್ತಾರೆ. ನೀನೀಗ ಅವುಗಳನ್ನ ಅನುಸರಿಸುವುದಕ್ಕೆ ಕಡಿಮೆ ಬಟ್ಟೆಗಳನ್ನ ಧರಿಸಿದಾಗ ನಿನ್ನ ದೇಹಕ್ಕೆ ಕಣ್ಣುಗಳು ಬೀಳುತ್ತದೆ ಹೊರತು ನಿನಗದರಿಂದ ಯಾವುದೇ ರೀತಿಯ ಉಪಯೋಗ ಆಗುವುದಿಲ್ಲ. ನೀನು ಕಡಿಮೆ ಬಟ್ಟೆ ಧರಿಸಿದಾಗ ಮುಜುಗರವನ್ನು ಅನುಭವಿಸ್ತಿಯೇ ವಿನಃ ಹೊಸತೇನೂ ಲಭ್ಯವಾಗುವುದಿಲ್ಲ. ನಿನ್ನ ದೇಹದಲ್ಲೂ ಕಾಪಿಟ್ಟುಕೊಳ್ಳುವ ಭಾಗವಿದೆ ಎನ್ನುವುದನ್ನು ಮರೆಯಬೇಡ. ಅಮ್ಮ ಸ್ವಾತಂತ್ರ್ಯಕ್ಕೆ ವಿರುದ್ಧವಾಗಿ ಮಾತನಾಡುತ್ತಿದ್ದಾಳೆ ಅಂತ ನಿನಗನಿಸಿದರು ಸಹ ಒಮ್ಮೆ ಯೋಚನೆ ಮಾಡು ಮಗಳೇ ಅಮ್ಮನ ಮಾತು ಯಾವತ್ತೂ ಸುಳ್ಳಾಗೋದಿಲ್ಲ.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ