ಸ್ಟೇಟಸ್ ಕತೆಗಳು (ಭಾಗ ೧೩೩೦) - ಸೈಲೆಂಟ್ ಹೋರಾಟ

ಸ್ಟೇಟಸ್ ಕತೆಗಳು (ಭಾಗ ೧೩೩೦) - ಸೈಲೆಂಟ್ ಹೋರಾಟ

ನನಗೆ ತುಂಬಾ‌ ನೋವಾಗುತ್ತಿದೆ. ನನಗೆ ಗೌರವ ಇಲ್ಲವೆಂದ ಮೇಲೆ‌ ನನ್ನನ್ನ ಬಳಸುವುದು ಯಾತಕ್ಕೆ. ನಿಮ್ಮ ಉಪಯೋಗಕ್ಕೆ‌ ಬಳಸಿಕೊಂಡು ಆನಂತರ ನನ್ನನ್ನು ಮೌನವಾಗಿಸಿಬಿಡೋದು. ತುಂಬಾ ಒಳ್ಳೆಯದು. ಹಾಗಾಗಿ ನಾನು ನಿಮ್ಮಮೇಲೆ ಕೇಸು ದಾಖಲಿಸುತ್ತೇನೆ. ನೀವು ಬೇರೆ ಬೇರೆ ರೀತಿಯ ಆಂಗ್ಲ ಪದ ಬಳಸ್ತೀರಾ, ಅದರಲ್ಲಿ ಹಲವು ಪದಗಳನ್ನ ಉಚ್ಛರಿಸುವಾಗ ನಮ್ಮನ್ನ ಬಳಸುವುದೇ ಇಲ್ಲ.‌ ಸೈಲೆಂಟ್ ಲೆಟರ್ ಮಾಡಿ ಬಿಟ್ಟೀದಿರಲ್ವಾ? ಯಾಕೆ. ಮತ್ತೆ ಪದಗಳ‌ ನಡುವೆ ನಮ್ಮನ್ನ ತುರುಕಿಸಿದ್ದು ಯಾಕೆ? ಬರೆಯುವುದ್ದಕ್ಕೆ ಬೇಕಾಗುವ ನಾವು ಮಾತಿಗಾಗುವಾಗ ಯಾಕೆ ಉಪಯೋಗಕ್ಕೆ ಬರ್ತಾ ಇಲ್ಲ. ಹಾಗಾಗಿ ತುಂಬಾ ನೋವಾಗಿದೆ ನಮಗೆ. ಇದರ ವಿರುದ್ದ ಹೋರಾಟ ಮಾಡಲು ನಿರ್ಧಾರ ಮಾಡಿದ್ದೇವೆ. ನೀವು ಬೆಂಬಲ ಕೊಡುವುದಿದ್ದರೆ ನಮ್ಮ ಜೊತೆ ಬಂದು ಬಿಡಿ ನಾವು‌ ಇಂಗ್ಲೆಂಡ್ ಗೆ ಹೊರಟಿದ್ದೇವೆ.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ