ಸ್ಟೇಟಸ್ ಕತೆಗಳು (ಭಾಗ ೧೩೩೨) - ಜೀವ

ಪುಟ್ಟ ಕಾಲುಗಳು ಹಾಗೇ ಕಣ್ಣ ಮುಂದೆ ಹಾದು ಹೋದವು. ಮುಖ ಕಾಣಲೇ ಇಲ್ಲ. ಕೆಲವು ಕ್ಷಣಗಳು ಹೋದ ದಾರಿಯನ್ನೇ ಗಮನಿಸುತ್ತಿದ್ದವು. ಕಾಯುವಿಕೆಗೆ ಫಲ ಸಿಕ್ಕಿತು ಕೃಷ್ಣನ ಆಗಮನ ಆ ಮನೆಗಾಗಿದೆ. ಕೆಲವು ವರ್ಷಗಳಿಂದ ಆ ಮನೆಯೊಳಗೆ ನಗು ಹಾಗೇ ಹಾದು ಹೋಗಿತ್ತೇ ವಿನಃ ಬದುಕಿರಲಿಲ್ಲ. ಈಗ ಮನೆಗೆ ನಗು ಹೆಜ್ಜೆ ಇಟ್ಟಾಗಿದೆ. ಪಿಳಿ ಪಿಳಿ ಕಣ್ಣುಗಳು, ಪುಟ್ಟ ಬೆರಳು, ಮುದ್ದಿನ ಮುಖ ನೋವನ್ನ ಮರೆಸಿ ಕೈಯೊಳಗೆ ನಗುತ್ತಿದೆ. ಇನ್ನು ಕನಸುಗಳು ಏಣಿ ಹಾಕಲಾರಂಬಿಸಿದೆ. ಹೊಸ ಸಂಬಂದಗಳು ಹುಟ್ಟಿಕೊಂಡವು. ಇನ್ನು ಬದುಕಿನ ಹೊಸ ದಿಶೆ ಆ ಮನೆಯಲ್ಲಿ ಆರಂಭವಾಗಲಿದೆ. ಪುಟ್ಟ ಜೀವವೊಂದು ಭೂಮಿಗೆ ಬರಬೇಕಿತ್ತು ಮನೆಯೊಳಗಿನ ಹೊರಗಿನ ಬದುಕಿನ ಎಲ್ಲ ದಿಶೆಗಳನ್ನ ಬದಲಾಯಿಸಲು, ಬದುಕಿಗೊಂದು ಸ್ಪೂರ್ತಿ ನೀಡಲು…
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ