ಸ್ಟೇಟಸ್ ಕತೆಗಳು (ಭಾಗ ೧೩೩೫) - ತಪ್ಪೇನು?

ಸ್ಟೇಟಸ್ ಕತೆಗಳು (ಭಾಗ ೧೩೩೫) - ತಪ್ಪೇನು?

ಅಮ್ಮ ನನ್ನ ತಪ್ಪೇನು? ನನಗ್ಯಾಕೆ ನಿಮ್ಮ ಜೊತೆ  ಬದುಕುವ ಅವಕಾಶ ಇಲ್ಲ. ನಿಮ್ಮ ಜೊತೆಗೆ ಆಟವಾಡುತ್ತ ಸಮಯ ಕಳೆಯುವ ಅವಕಾಶ ಯಾಕಿಲ್ಲ. ಇವತ್ತು ಮನೆ ಮುಂದೆ ಆಡುವಾಗ ನಾಯಿಯೊಂದು ಕಚ್ಷಿದ ಕಾರಣ ಅಮ್ಮ ದೊಡ್ಡಪ್ಪ ಪಕ್ಕದ ಊರಿನ ಆಸ್ಪತ್ರೆಗೆ ಕರೆದೊಯ್ದರು ಅಲ್ಲಿ ಮದ್ದು ನೀಡಿ ಇನ್ನೂ ದೊಡ್ಡ ಆಸ್ಪತ್ರೆಗೆ ಬೈಕ್ ನಲ್ಲಿ ದೊಡ್ಡಪ್ಪನ‌ ಜೊತೆ ಹೊರಟಿದ್ದೆ. ಆದರೆ ದಾರಿ ಅದ್ಯಾರೋ ಪೋಲಿಸ್ನೋರಂತೆ ಗಾಡಿ ನಿಲ್ಲಿಸಿ ರಸ್ತೆ ನಿ‌ಯಮ ಪಾಲಿಸದೇ ಇದ್ದದಕ್ಕೆ ಪೈನ್ ಕೇಳಿದರು ದೊಡ್ಡಪ್ಪ ಪರಿಸ್ಥಿತಿ ವಿವರಿಸಿದರೂ ಅವರು ಕೇಳುವುದ್ದಕ್ಕೆ ತಯಾರು ಇರಲಿಲ್ಲ. ಆದರೂ ಕೊನೆಗೂ ಒಪ್ಪಿ ಸ್ವಲ್ಪ ದೂರ ಚಲಿಸಿದ್ವಿ ಅಷ್ಟರಲ್ಲೇ ಇನ್ನೊಬ್ರು ಪೋಲಿಸ್ ನಮ್ಮ ಗಾಡಿಯನ್ನ ಎಳೆದು ಬಿಟ್ರು. ಗಾಡಿ  ಆಯ ತಪ್ಪಿ ಕೆಳಗೆ ಬಿದ್ದು ಹೋಯಿತು. ಅಮ್ಮ ದೊಡ್ಡಪ್ಪ ಪಕ್ಕ ಬಿದ್ದರು. ನಾನು ರಸ್ತೆ ಮದ್ಯಕ್ಕೆ ಬಿದ್ದೆ. ಅದ್ಯಾವುದೋ ದೊಡ್ಡ ಗಾಡಿ ನನ್ನ ಮೇಲೆ ಹಾದು ಹೋಯಿತು. ಬದುಕಬೇಕೂ ಅನ್ನಿಸಿದರೂ ಉಸಿರು ನಿಂತು ಹೋಯಿತು. ನೋವಾಗಿದೆ ಅನ್ನುವಷ್ಟರಲ್ಲಿ ನಾನು ಜೀವ ಕಳೆದುಕೊಂಡಿದ್ದೆ. ಇಲ್ಲಿ ನನ್ನ ತಪ್ಪೇನು?

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ