ಸ್ಟೇಟಸ್ ಕತೆಗಳು (ಭಾಗ ೧೩೩೯) - ಅವಕಾಶ

ಸ್ಟೇಟಸ್ ಕತೆಗಳು (ಭಾಗ ೧೩೩೯) - ಅವಕಾಶ

ನೀನು ಇನ್ನೊಮ್ಮೆ ಸರಿಯಾಗಿ ಯೋಚನೆ ಮಾಡು, ನೀನು ಇದಕ್ಕಿಂತ ಹಿಂದೆ ಸಿಕ್ಕ ಒಂದಷ್ಟು ಅವಕಾಶಗಳನ್ನ ಆ ಕ್ಷಣದಲ್ಲಿ ಬಳಸಿಕೊಂಡಿಲ್ಲ, ಬಳಸಿಕೊಂಡಿದಿದ್ರೆ ನೀನು ಇರುವ ಸ್ಥಳ ಮತ್ತು ಪದವಿ ತುಂಬ ಬದಲಾಗಿರುತ್ತಿತ್ತು. ಈ ಕ್ಷಣದಿಂದ ಯೋಚನೆ ಮಾಡಿ ನಿರ್ಧಾರ ಮಾಡು. ನಿನ್ನ ಮುಂದೆ ಒಂದಷ್ಟು ಅವಕಾಶಗಳು ಕಾಯುವುದಕ್ಕಿದೆ ನೀನು ಬಳಸಿಕೊಳ್ಳುವ ಪ್ರತಿ ಅವಕಾಶವೂ ನಿನ್ನ ಬದುಕನ್ನ ಖಂಡಿತವಾಗಿಯೂ ಬದಲಾಯಿಸುತ್ತದೆ. ಸಣ್ಣದು, ದೊಡ್ಡದು ಅಂತ ಸುಮ್ಮನಿದ್ದು ಬಿಡಬೇಡ ದಯವಿಟ್ಟು ಈ ಕ್ಷಣದಿಂದ ಬದಲಾಗು. ನೀ ಇಡುವ ಸಣ್ಣ ಹೆಜ್ಜೆಯೂ ದೊಡ್ಡ ಬದಲಾವಣೆಯನ್ನು ಖಂಡಿತವಾಗಿಯೂ ತರುತ್ತದೆ. ಮಗನ ಬಳಿ ಕುಳಿತ ರಾಮದಾಸರು ತಮ್ಮ ಮಗ ಎಲ್ಲ ಪ್ರತಿಭೆಯನ್ನು ಹೊಂದಿದ್ದು ಇನ್ನೂ ಕೂಡ ಅವಕಾಶಗಳಿಲ್ಲದೆ ಮನೆಯಲ್ಲಿ ಇರುವುದನ್ನು ಕಂಡು ತಿದ್ದಿ ಹೇಳುವುದಕ್ಕೆ ಆರಂಬಿಸಿದ್ದಾರೆ. ಆದರೆ ಆ ಮನೆ ಮಗನು ಪ್ರತಿಸಲ ಅಪ್ಪ ಹೇಳಿದಾಗ ಹು ಅನ್ನುತ್ತಾನೆ ವಿನಃ ಅದರ ಕಡೆಗೆ ಹೆಜ್ಜೆಯನ್ನು ಇಟ್ಟೇ ಇಲ್ಲ.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ