ಸ್ಟೇಟಸ್ ಕತೆಗಳು (ಭಾಗ ೧೩೪೩) - ಚೆಂಡೆ

ಸ್ಟೇಟಸ್ ಕತೆಗಳು (ಭಾಗ ೧೩೪೩) - ಚೆಂಡೆ

ನೋವು ಹೆಚ್ಚಾಗಿದೆ. ರಕ್ತಕ್ಕೆ ಇಳಿಯುವುದಕ್ಕೆ ಸ್ಥಳಾವಕಾಶವೇ ಸಿಕ್ತಾ ಇಲ್ಲ. ಆ ಗಾಯದ ತುಂಬೆಲ್ಲ ಕೋಲುಗಳು ಉರುಳುತ್ತ ಉರುಳುತ್ತಾ ಗಾಯದ ತೀವ್ರತೆ ಹೆಚ್ಚಾಗ್ತಾ ಇದೆ. ಮನಸ್ಸು ಗಾಯವಾಗಿದೆ ಅನ್ನುವುದನ್ನ ಸಾರಿ ಹೇಳುತ್ತಿದ್ದರು ಕೂಡ ಎದೆಯೊಳಗೆ ಬಡಿಯುತ್ತಿರುವ ಚಂಡೆಯ ಕಂಪನ ಎಲ್ಲವನ್ನ ಮರೆಸಿ ನೋಡುಗರನ್ನು ಕುಣಿಯುವಂತೆ ಮಾಡುತ್ತಿದೆ. ಆತನಿಗೆ ಹುಚ್ಚು ಅನ್ನಬಹುದು ಸಣ್ಣಂದಿನಿಂದಲೂ ತಾಳಗಳನ್ನು ಕಲಿಯುವ ವಿಪರೀತ ಆಸೆ. ಹಾಗಾಗಿ ಚೆಂಡೆ ಬಡಿಯುವುದನ್ನು ಆರಂಭಿಸಿದ. ಮೊದಲು ತಾಳ ದಕ್ಕಲಿಲ್ಲ.  ಆದರೆ ದಿನ ಕಳೆದಂತೆ ಸತತ ಅಭ್ಯಾಸವೋ ಏನೋ ನೋಡುಗರನ್ನ ಹಾಗೂ ತಾಳಕ್ಕೆ ಕುಣಿಯುವುದಕ್ಕೆ ನಿಂತವರನ್ನ ನೆಲದ ಮೇಲೆ ಕಾಲು ಇಡದಂತೆ ಕುಣಿಸುವ ತಾಕತ್ತು ಅವನಿಗೆ ಪ್ರಾಪ್ತಿಯಾಯಿತು. ಆತ ಅದನ್ನ ಆರಾಧಿಸುತ್ತಾನೆ ಪ್ರೀತಿಸುತ್ತಾನೆ ಮನಸ್ಸಿನಲ್ಲಿ ಏನೇ ಯೋಚನೆ ಮೂಡ್ತಾ ಇದ್ರು ಒಂದು ಕ್ಷಣ  ಕೈಯಲ್ಲಿ ಚಂಡೆ ಹಿಡಿದಾಗ ಎಲ್ಲವನ್ನು ಮರೆತುಬಿಡುತ್ತಾನೆ. ದೇಹದಲ್ಲಿ ಬೆವರ ಹನಿಗಳು ಹರಿದು ನೆಲವನ್ನು ತಲುಪಿದರು ಸಹ ಆತ ಚಂಡೆಯ ತಾಳಗಳನ್ನು ನಿಲ್ಲಿಸುವುದಿಲ್ಲ. ಕೈ ಗಾಯ, ಕಾಲಿನ ಸುಸ್ತು ಇದ್ಯಾವುದೂ  ಸಂಭ್ರಮದ ಮುಂದೆ ಸಮಸ್ಯೆ ಅನ್ನಿಸಲಿಲ್ಲ. ಆತನ ಬದುಕಿನ ರೀತಿ ಬದುಕನ್ನ ಸಂಭ್ರಮಿಸಿದರೆ ಸಣ್ಣಪುಟ್ಟ ನೋವುಗಳು ತೊಂದರೆ ಮಾಡುವುದಿಲ್ಲ ಅನ್ನೋದು ಅರ್ಥವಾಗಿ ಹೋಯಿತು .ಬದುಕಿನ ಪಾಠಗಳನ್ನ ಚಂಡೇನಾದ ಮೂಲಕ ಸರಿಯಾಗಿ ಕಿವಿಯೊಳಕ್ಕೆ ಇಳಿಸಿದ. ನಿಮಗೂ ಬದುಕಿನ ಪಾಠ ಬೇಕಾದ್ರೆ ಹಾಗೆ ಚೆಂಡೆ ನುಡಿಸುವವರ ಕಣ್ಣಾಲಿಗಳನ್ನ ನಗುವ ಮುಖಗಳನ್ನ ದೇಹದ ಕುಣಿತಗಳನ್ನ ಸಂಭ್ರಮದ ಮನಸ್ಸುಗಳನ್ನ ಗಮನಿಸಿಬಿಡಿ ಬದುಕಿಗೆ ಹೊಸ ಪಾಠ ಒಂದು ಲಭ್ಯವಾಗುತ್ತದೆ

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ