ಸ್ಟೇಟಸ್ ಕತೆಗಳು (ಭಾಗ ೧೩೪೭) - ಪರಿಸರ ದಿನ

ಅಲ್ಲಿರುವ ದೊಡ್ಡವರೊಬ್ಬರು ಅವರ ಶಾಲೆಯೊಂದನ್ನ ಕಟ್ಟಲು ಕಾಡನ್ನ ನೆಲಸಮ ಮಾಡಿದ್ದರು, ಈ ಊರಿನ ದೊಡ್ಡವರೊಬ್ಬರು ಅವರ ಮನೆಯನ್ನ ವಿಸ್ತಾರಗೊಳಿಸುವುದ್ದಕ್ಕೆ ಮರಗಳನ್ನ ಕಡಿದು ಹಾಕಿದ್ದರು, ಊರಲಿದ್ದ ಗದ್ದೆ ತೋಟ ಕಾಡನ್ನ ಕಡಿದು ಬಂಗ್ಲೆಗಳನ್ನ ಕಟ್ಟಿದವರು ಊರಿನ ಮುಖ್ಯಸ್ಥರಾಗಿದ್ದಾರೆ. ಇವರೆಲ್ಲರೂ ಇಂದು ಸರಕಾರಿ ಶಾಲೆಯ ಮುಖ್ಯ ವೇದಿಕೆಯಲ್ಲಿ ಪರಿಸರ ದಿನಾಚರಣೆಯ ಗಿಡ ನೆಡುವ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿದ್ದಾರೆ, ಇವರ ಕೈಗಳಿಂದ ನೆಲದೊಳಕ್ಕೆ ಇಳಿಯಲಿರುವ ಗಿಡಕ್ಕೆತುಂಬಾ ನೋವಿದೆ ತನ್ನ ಬಳಗದವರನ್ನ ಕೊಂದಿರುವ ಕೈಗಳು ನೀಡುವ ನೀರುಣಿಸಲಿದೆ ಎಂದು ಆದರೂ ವಿದಿ ಇಲ್ಲದೆ ನೆಲದೊಳಕ್ಕೆ ಇಳಿದಿದೆ, ಬೇರನ್ನ ಆಳಕ್ಕೆ ಇಳಿಸುತ್ತಿದೆ.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ