ಸ್ಟೇಟಸ್ ಕತೆಗಳು (ಭಾಗ ೧೩೪೯) - ಇರುವೆ

ಮುಂದಿನವರು ಹೋಗಿದ್ದಾರೆ ಅನ್ನೋ ಕಾರಣಕ್ಕೆ ಉಳಿದ ಇರುವೆಗಳು ಬೆನ್ನು ಬಿದ್ದು ಚಲಿಸಿದವು. ಅವುಗಳಿಗೂ ಗೊತ್ತಿಲ್ಲ ತಮ್ಮ ನೆಲೆ ಎಲ್ಲಿಗೆ ತಲುಪುತ್ತೆ ಎಂದು. ಹೊರಟಿದ್ದಾವೆ ಮೊದಲು ಹೊರಟವನು ಸಕ್ಕರೆ ತಂದಿದ್ದ. ಹಾಗಾಗಿ ತಮಗೂ ಸಿಗುತ್ತೆ ಅನ್ನುವ ಆಸೆ. ಸಕ್ಕರೆ ಡಬ್ಬದೊಳಗೆ ಸಿಕ್ಕ ಸ್ವಲ್ಪ ಜಾಗದೊಳಕ್ಕೆ ನುಸುಳಿ ಸಿಹಿ ಸವಿಯೋದ್ದಕ್ಕೆ ದೊಡ್ಡವರೊಬ್ಬರು ಹೇಳಿದರು ಇಲ್ಲೇ ತುಂಬಾ ಹೊತ್ತು ಇರೋದು ಬೇಡ, ಸಿಕ್ಕಿದರಲ್ಲೇ ತೃಪ್ತಿ ಪಡೋಣ ಅಂದ್ರು ಕೆಲವರು ಕೇಳಲೇ ಇಲ್ಲ. ಒಳಗೆ ಚೆನ್ನಾಗಿದ್ದೇವೆ ಇಲ್ಲೇ ಇರ್ತೇವೆ ಅಂದು ಉಳಿದು ಬಿಟ್ಟರು. ಕೆಲವು ದಿನ ಚೆನ್ನಾಗಿತ್ತು. ಮನೆಯವರು ಸಕ್ಕರೆ ಡಬ್ಬಿಯ ಮುಚ್ಚಳ ಗಟ್ಟಿಯಾಗಿ ಹಾಕಿದರು. ಒಳಗೆ ಉಳಿದವರು ಅಲ್ಲೇ ಉಸಿರು ಗಟ್ಟಿ ಸತ್ತು ಹೋದರು... ಮಾತು ಕೇಳಬೇಕಿತ್ತು. ಬದುಕಿನ ದಾರಿ ಹುಡುಕಬೇಕಿತ್ತು.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ