ಸ್ಟೇಟಸ್ ಕತೆಗಳು (ಭಾಗ ೧೩೫೦) - ಬೇಡ

ನಿರಾಶೆಯ ಮುಖ ಹೊತ್ತು ಕುಳಿತಿದ್ದ ರಮೇಶನ ಬಳಿ ಅವನ ಶಾಲೆಯ ಮೇಷ್ಟ್ರು ಬಂದು ಮಾತನಾಡುವುದಕ್ಕೆ ಆರಂಭಿಸಿದರು. ಯಾಕೋ ರಮೇಶ ಪ್ರತಿದಿನವೂ ಉತ್ಸಾಹದಿಂದ ಇರುತ್ತಿದ್ದವ, ಇವತ್ಯಾಕೆ ಬೇಸರದಿಂದ ಮುದುಡಿ ಕುಳಿತಿದ್ದೀಯಾ? ಅದಕ್ಕೆ ರಮೇಶ ಇಲ್ಲ ಸರ್, ನನ್ನಿಂದ ಇನ್ನು ಮುಂದೆ ಸಾಧ್ಯ ಆಗುವುದಿಲ್ಲ ಎಷ್ಟು ಅಂತ ಪ್ರಯತ್ನ ಮಾಡೋದು?ಎಷ್ಟು ಪ್ರಯತ್ನ ಪಟ್ರು ಗೆಲುವು ಅನ್ನೋದು ದೂರದಲ್ಲೇ ಹಾದು ಹೋಗ್ತಾ ಇದೆ. ಒಂದು ದಿನವೂ ಗೆಲುವಿನ ನಿಲ್ದಾಣದಲ್ಲಿ ನನಗೆ ಇಳಿಯುವುದಕ್ಕೆ ಸಾಧ್ಯವಾಗಲಿಲ್ಲ .
ನೋಡು ರಮೇಶ ನಿನ್ನ ಗೆಲುವು ಸಾಧ್ಯವಾಗದೇ ಇರುವುದಕ್ಕೆ ಕಾರಣ ನೀನೇ, ನಿನ್ನ ನಿರ್ಧಾರ ಮತ್ತು ಗುರಿ ಅದನ್ನು ನಿನ್ನ ಕಣ್ಣ ಮುಂದೆ ಬರುವ ಎಲ್ಲರಲ್ಲೂ ಚರ್ಚಿಸ್ತಾ ಕುಳಿತುಕೊಂಡರೆ ಆ ಗುರಿ ಯಾವತ್ತೂ ಸಫಲವಾಗುವುದಿಲ್ಲ. ಯುದ್ಧವನ್ನು ಘೋಷಿಸಿದ ಮೇಲೆ ನೇರವಾಗಿ ಯುದ್ಧವನ್ನೇ ಮಾಡಬೇಕು ಅದರ ಹೊರತಾಗಿ ಕಣ್ಣಿಗೆ ಕಂಡ ಎಲ್ಲರಲ್ಲೂ ಯುದ್ಧದ ಬಗ್ಗೆ ಚರ್ಚಿಸ್ತಾ ಹೋದ್ರೆ ನೀನು ಯುದ್ದ ಗೆಲ್ಲಲು ಸಾಧ್ಯವಾಗುವುದಿಲ್ಲ. ಹಾಗಾಗಿ ಇನ್ನು ಮುಂದೆ ನಿನ್ನ ಗುರಿಯ ಕಡೆಗೆ ನೇರ ದೃಷ್ಟಿಯಿಂದ ಸಾಗಿಬಿಡು ಬೇಗ ಗುರಿ ತಲುಪ್ತಿಯಾ. ಶಾಲೆಯಲ್ಲಿ ಪಾಠ ಮಾಡಿದ ಮೇಷ್ಟ್ರ ಮಾತು ಇವತ್ತು ಇವನ ಮನಸ್ಸಿನ ಒಳಗೆ ಇಳಿಯಿತು.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ