ಸ್ಟೇಟಸ್ ಕತೆಗಳು (ಭಾಗ ೧೩೬೦) - ಬೇಡಿಕೆ

ಅಲ್ಲ ನನ್ನ ನಿಜವಾದ ಕೆಲಸ ಏನು? ನಿಮ್ಮ ಬೆರಳುಗಳನ್ನು ರಕ್ಷಿಸುವುದು, ಕೈಯ ಅಂದವನ್ನು ಹೆಚ್ಚಿಸುವುದು, ಹಾಗಾಗಿ ನಿಮ್ಮ ಕೈಯಲ್ಲಿ ಉಗುರಾಗಿ ನಾನು ಶೋಭಿಸುತ್ತೇನೆ. ಆದರೆ ನೀವು ಮಾಡ್ತಾ ಇರೋದು ಏನು? ಕೆಲವರಂತೂ ನನ್ನನ್ನ ಕಚ್ಚಿ ಕಚ್ಚಿ ತಿಂದು ಸರಿಯಾಗಿ ಬೆಳೆಯುವ ಅವಕಾಶವನ್ನೇ ನೀಡಿಲ್ಲ. ಇನ್ನು ಕೆಲವರು ಮಣ್ಣು ಕೊಳೆಗಳನ್ನು ತುಂಬಿಸಿ ನನ್ನ ಅಂದವನ್ನು ಹಾಳುಮಾಡಿ ಬಿಟ್ಟಿದ್ದೀರಿ. ಕೆಲವರಂತೂ ನನ್ನ ಮೇಲೆ ಬಣ್ಣಗಳನ್ನ ಹಚ್ಚಿಹಚ್ಚಿ ಉಸಿರುಗಟ್ಟಿಸಿದ್ದೀರಿ. ಒಂದಷ್ಟು ರೋಗ ತಂದಿದ್ದೀರಿ. ನಿಮಗಿಷ್ಟದ ಆಕಾರದಲ್ಲಿ ನನ್ನನ್ನ ರೂಪಿಸುತ್ತಿದ್ದೀರಿ. ನನ್ನನ್ನ ನನ್ನ ಹಾಗೆ ಬದುಕುವುದಕ್ಕೆ ಬಿಡಿ .ನಾನು ಹೆಚ್ಚು ಬೆಳಿತಾ ಇದ್ದೇನೆ ಅನ್ನುವಾಗ ನನ್ನನ್ನು ತುಂಡರಿಸಿ ನನ್ನ ಅಹಂಕಾರ ಕಡಿಮೆ ಆಗುತ್ತೆ. ನನ್ನನ್ನ ಅಂದಗೊಳಿಸುವುದನ್ನು ಒಪ್ಪಿಕೊಳ್ಳುತ್ತೇನೆ. ಆದರೆ ಅದು ವಿಪರೀತವಾಗಿ ನನಗೆ ತೊಂದರೆ ಆಗಬಾರದು. ಒಟ್ಟಿನಲ್ಲಿ ನನ್ನ ಬಳಕೆ ಯಾವ ಕಾರಣಕ್ಕಾಗಬೇಕೋ ಹಾಗೆ ಮಾಡಿಬಿಡಿ ಮತ್ತೊಂದು ಮನವಿ ನಿಮ್ಮ ಎಂಜಲನ್ನ ನನ್ನ ಮೈಗೆಲ್ಲ ಹಚ್ಚಿ ನಾನು ಅಸುರಕ್ಷಿತನಾಗಿ ಬದುಕುವ ಹಾಗೆ ಮಾಡಲೇಬೇಡಿ. ಇದು ನನ್ನದೊಂದು ಮನವಿ. ಇವತ್ತು ಮನೆಯಲ್ಲಿ ಕುಳಿತಿದ್ದಾಗ ನನ್ನ ಉಗುರು ನನ್ನಲ್ಲಿ ಬೇಡಿಕೆ ಸಲ್ಲಿಸಿತ್ತು
ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ