ಸ್ಟೇಟಸ್ ಕತೆಗಳು (ಭಾಗ ೧೩೬೯) - ದಾರಿ

ಸ್ಟೇಟಸ್ ಕತೆಗಳು (ಭಾಗ ೧೩೬೯) - ದಾರಿ

ಹೊರಟಿರುವುದೆಲ್ಲಿಗೆ? ಕೈ ಹಿಡಿದು ಜಗ್ಗಿ ನಿಲ್ಲಿಸಿ ವೇದವ್ಯಾಸರು ಕೇಳಿದರು. ಹೇಳೋ ಮಾರಾಯ ನೀನಿಷ್ಟರವರೆಗೆ ಪಡೆದುಕೊಂಡ ಶಿಕ್ಷಣ, ನಿನ್ನ ಹೆತ್ತವರು ನಿನ್ನ ಜೊತೆ ನೀಡಿದ ಅಭಯ, ನಿನ್ನ ಬದುಕಿನ ಅನುಭವಗಳು, ಇದೆಲ್ಲವನ್ನು ಒಟ್ಟುಗೂಡಿಸಿಕೊಂಡು ನಿನ್ನಲ್ಲಿ ದಾರಿಯನ್ನು ಹುಡುಕುವುದಕ್ಕೆ ಹೇಳಿದ್ದೆ. ಆ ಹುಡುಕಿದ ದಾರಿ ನೀನು ನಿನ್ನ ಕಣ್ಣ ಮುಂದೆ ಇರುವ ಸಮಸ್ಯೆಗಳಿಂದ ತಪ್ಪಿಸಿಕೊಳ್ಳುವುದಕ್ಕಲ್ಲ, ಆ ಸಮಸ್ಯೆಗಳನ್ನ ಎದುರಿಸಿ ಗೆಲ್ಲುವುದಕ್ಕೆ. ದಾರಿ ಆಯ್ಕೆಯನ್ನು ನಿನ್ನ ಮುಂದೆ ಬಿಟ್ಟಿದ್ದೆ. ನೀನೇ ನಿನಗೆ ಬೇಕಾದ ದಾರಿಯನ್ನು ಆಯ್ಕೆ ಮಾಡಿಕೊಳ್ಳಬೇಕೆಂದು. ಆದರೆ ನೀನೀಗ ವರ್ತಿಸುತ್ತಿರುವ ರೀತಿ ನೋಡಿದರೆ ನೀನು ಗೆಲುವಿನ ದಾರಿಯನ್ನು ಹುಡುಕುವ ಯೋಚನೆ ಮಾಡುತ್ತಿಲ್ಲ. ಒಂದು ಸಲ ತಪ್ಪಿಸಿಕೊಂಡು ಬಿಟ್ಟರೆ ಸಾಕು ಮತ್ತೆ ಈ ಯೋಚನೆ ಇರುವುದಿಲ್ಲ ಅನ್ನೋದು ನಿನ್ನ ವಾದ. ನೋಡು ಒಂದು ಸಲ ಗೆಲ್ಲುವ ಹುಮ್ಮಸ್ಸು ನಿನ್ನಲ್ಲಿ ತುಂಬಿದರೆ ಆ ದಾರಿ ಹೆಚ್ಚು ಇಷ್ಟವಾಗುತ್ತದೆ. ಬೆವರು ಹರಿಸಿ ಕಷ್ಟಪಟ್ಟು ಆ ದಾರಿಯನ್ನ ಕಂಡುಕೋ. ಉಳಿದದ್ದೆಲ್ಲವೂ ಇತಿಹಾಸವಾಗಿ ಉಳಿದುಬಿಡುತ್ತದೆ ನೆನಪಿಟ್ಟುಕೋ. ಈ ಮಾತು ಒಂದು ಸಲ ನಿಂತು ಯೋಚಿಸುವಂತೆ ಮಾಡಿತು. ದಾರಿ ಬದಲಿಸಿ ಗೆಲುವಿನ ದಾರಿಯ ಕಡೆಗೆ ಹೆಜ್ಜೆ ಇಟ್ಟೆ ಆಗಾಗೆ ಹೇಗೆ ಹೇಳುವವರೊಬ್ಬರು ನಮ್ಮ ದಾರಿಯಲ್ಲಿ ಜೊತೆಯಾಗಬೇಕು.

ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ