ಸ್ಟೇಟಸ್ ಕತೆಗಳು (ಭಾಗ ೧೩೭೦) - ಬದುಕಾದರೆ

ಆ ಊರಲ್ಲಿ ಒಂದು ಎತ್ತರವಾದ ಬೆಟ್ಟವಿತ್ತು. ಆ ಬೆಟ್ಟವನ್ನು ಹಲವು ಜನ ಹತ್ತಬೇಕು ಅಂತ ಬಯಸಿದ್ದರು. ಆದರೆ ಹಲವರು ಅರ್ಧ ಹತ್ತಿ ಇಳಿದು ವಾಪಸು ಹೋಗಿಬಿಟ್ಟಿದ್ದರು. ಆ ಬೆಟ್ಟದ ಮೇಲೆರಿ ಬಾವುಟವನ್ನು ಹಾರಿಸುವವರು ವಿಜಯಶಾಲಿಗಳು ಜಗತ್ತಿನ ಅದ್ಭುತ ವ್ಯಕ್ತಿಗಳು ಅಂತ ಕೊಂಡಾಡುವುದಕ್ಕೆ ಪ್ರತಿಯೊಬ್ಬರೂ ಕಾಯ್ತಾ ಇದ್ರು. ಅದಕ್ಕೆ ಒಂದು ತಿಂಗಳ ತರಬೇತಿಯೂ ನಡೆಯಿತು. ತರಬೇತಿಯಲ್ಲಿ ಭಾಗವಹಿಸಿದ ಹಲವರಲ್ಲಿ ಕೆಲವರು ಮಾತ್ರ ಹತ್ತು ದಿನ ಹೆಜ್ಜೆ ಇಟ್ಟರು. ಆದರೆ ಬೆರಳೆಣಿಕೆಯ ವ್ಯಕ್ತಿಗಳು ಮಾತ್ರ ಹತ್ತುವುದ್ದಕ್ಕೆ ಆರಂಭ ಮಾಡಿದರು. ಹತ್ತಿ ಮೇಲೇರಿ ಬಾವುಟವನ್ನ ಹಾರಿಸಿ ಸುಸ್ತಾಗಿ ಕುಳಿತಾಗ ಆ ಬೆಟ್ಟದ ಮೇಲೆ ಬದುಕುತ್ತಿದ್ದ ಒಂದು ಪುಟ್ಟ ಕುಟುಂಬ ಆ ವ್ಯಕ್ತಿಗೆ ಆಹಾರ ಕೊಟ್ಟು ದೇಹಕ್ಕೆ ಒಂದಿಷ್ಟು ಶಕ್ತಿ ನೀಡಿದರು. ವ್ಯಕ್ತಿಗೆ ಆಶ್ಚರ್ಯವಾಯಿತು. ನಾನು ಈ ಬೆಟ್ಟ ಹತ್ತುವುದಕ್ಕೆ ಒಂದು ತಿಂಗಳ ಪ್ರಯತ್ನಪಟ್ಟಿದ್ದೇನೆ, ಇವರ ಬದುಕು ಇಲ್ಲೇ ಸಾಗಿದೆ. ಪ್ರತಿದಿನವೂ ಕೆಳಗಿಳಿದು ಮೇಲೇರಲೇಬೇಕು. ಇದು ಹೇಗೆ ಅಂತ ಪ್ರಶ್ನೆ ಬಿದ್ದಾಗ "ಸರ್ ನೀವೇನು ಮಾಡ್ತಾ ಇರೋ ಆ ಕೆಲಸ ನಿಮ್ಮ ಶ್ರೇಯಸ್ಸಿಗೆ ನಮ್ಮದು ಬದುಕು ಅಲ್ವಾ ಸರ್. ಯಾವ ಕೆಲಸವನ್ನು ನಮ್ಮ ಬದುಕು ಅಂದುಕೊಳ್ಳುತ್ತೇವೋ ಅದನ್ನು ತುಂಬಾ ಸುಲಭವಾಗಿ ಮುಗಿಸುತ್ತೇವೆ. ಮೇಲೇರಿ ಜಗತ್ಪ್ರಸಿದ್ಧನಾದವನಿಗೆ ಆ ಮಾತು ಕಣ್ತೆರೆಸಿತು.
ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ