ಸ್ಟೇಟಸ್ ಕತೆಗಳು (ಭಾಗ ೧೩೭೧) - ಮೊದಲಿನಂತಿಲ್ಲ

ಸ್ಟೇಟಸ್ ಕತೆಗಳು (ಭಾಗ ೧೩೭೧) - ಮೊದಲಿನಂತಿಲ್ಲ

ಆಗಾಗ ಸಿಕ್ಕಿದವರೆಲ್ಲ ಹೇಳ್ತಾರೆ ನೀವು ಊರು ಬಿಟ್ಟು ಬಂದ್ಮೇಲೆ ನಿಮ್ಮ ಮನೆ ಪೂರ್ತಿ ಬದಲಾಗಿ ಬಿಟ್ಟಿದೆ. ನೀವಿದ್ದಾಗ ನಿಮ್ಮ ಮನೆ ಸುತ್ತಮುತ್ತ ಆಗಾಗ ಬರ್ತಾ ಇರಬೇಕು ನೋಡ್ತಾ ಇರಬೇಕು ಅಂತ ಅನ್ನಿಸ್ತಾ ಇತ್ತು. ನೀವು ಬೆಳಿತಾ ಇದ್ದ ತರಕಾರಿಗಳು, ಮನೆಯನ್ನ ಇಟ್ಟುಕೊಂಡಿದ್ದ ರೀತಿ, ಅಕ್ಕ ಪಕ್ಕದವರ ಜೊತೆಗಿನ  ಬಾಂಧವ್ಯ, ಎಲ್ಲವೂ ತುಂಬಾ ಖುಷಿ ಕೊಡ್ತಾ  ಇತ್ತು. ಆದರೆ ನೀವು ಕೆಲಸದ ಕಾರಣಕ್ಕೆ ಊರು ಬಿಟ್ರಿ,ಅದರ ಜೊತೆಗೆ ನಿಮ್ಮ ಜೊತೆಗಿದ್ದ ಒಡನಾಟ ಮತ್ತು ನಿಮ್ಮ ಮನೆ ಎಲ್ಲವೂ ಮಾಯವಾಗುತ್ತಾ ಹೋಯಿತು. ಆ ಮನೆ ಈಗ ಮೊದಲಿನಂತಿಲ್ಲ. ಅಲ್ಲಿ ಕಳೆ ಗಿಡಗಳೆಲ್ಲ ಬೆಳೆದು ಮನೆಯೋ ಭೂತ ಬಂಗಲೆಯಾಗಿದೆ. ಆ ದಾರಿಯಲ್ಲಿ ಯಾರು ಈಗ ಅಡ್ಡಾಡದಂತಾಗಿದೆ. ನೀವಲ್ಲಿ ಇರಬೇಕಿತ್ತು ಸರ್ ಎಂದು ಹಾಗೆ ಮುಂದೆ ಹೋಗಿ ಬಿಡುತ್ತಾರೆ.

ಊರು ಬಿಟ್ಟವನಿಗೆ ಮತ್ತೆ ತನ್ನದೇ ಮೂಲ ನೆಲೆಯ ಬಗ್ಗೆ ಯೋಚನೆ ಹುಟ್ಟುಕೊಂಡಿದೆ. ಬದುಕಿನ ಅನಿವಾರ್ಯತೆಗೆ ಊರು ಬಿಟ್ಟಿದ್ದಾನೆ ಆದರೆ ತಾನು ಹಾಗಾಗಿ ಬಿಟ್ಟಿದ್ದೇನೆ ತನ್ನ ಮೂಲ ಸತ್ವವನ್ನು ಕಳೆದುಕೊಂಡು ಯಾರದೋ ಹಂಗಿನಲ್ಲಿ ದಿನವನ್ನು ದುಡುತ್ತಾ ತನ್ನನ್ನು ತಾನು ಕಳೆದುಕೊಂಡಿದ್ದೇನೆ ಮೊದಲಿನಂತೆ ತಾನಿಲ್ವ ಹೀಗೆ ಪ್ರಶ್ನೆಗಳಷ್ಟೇ ಅವನೊಳಗೆ ಉಳಿದುಬಿಟ್ಟಿದೆ. ಮತ್ತೆ ಮತ್ತೆ ಯೋಚಿಸುತ್ತಾನೆ ದಿನದೊಡ್ತಾನೆ...

ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ