ಸ್ಟೇಟಸ್ ಕತೆಗಳು (ಭಾಗ ೧೩೭೨) - ದೇವರ ಭಯ

ನೀನ್ಯಾಕೆ ಕೈ ಮುಗಿಯೋದ್ದಕ್ಕೆ ಬಂದಿದ್ದೀಯಾ? ಗುಡಿಯ ಒಳಗಿರುವ ನನಗೆ ಕೈ ಮುಗಿದ ಕೂಡಲೇ ನಿನಗೆಒಳಿತಾಗುತ್ತದೆ ಅಂದುಕೊಂಡಿದ್ದೀಯಾ? ಓ ಮಾರಾಯ ನಾನು ನಿನ್ನ ಪರಿಶ್ರಮಕ್ಕೆ ಬೆಲೆಕೊಡುವವನು ಹೊರತು ಸೋಮಾರಿತನಕ್ಕೆ ಬಹುಮಾನ ನೀಡುವವನಲ್ಲ, ಅರ್ಥವಾಯಿತಾ?
ಒಂದಿನಿತೂ ಜೀವನದಲ್ಲಿ ಶಿಸ್ತನ್ನ ಪಾಲಿಸದೆ, ಆ ದಿನದ ಕೆಲಸವನ್ನ ಆ ದಿನವೇ ಮಾಡದೇ, ಮನಸಲ್ಲಿ ಬಂದ ಆಲೋಚನೆಗಳಿಗೆ ಸರಿಯಾದ ಮೂರ್ತ ರೂಪ ನೀಡದೆ, ಯಾರಿಗೂ ಗೌರವ ನೀಡದೆ, ಸ್ವಂತ ಬುದ್ಧಿ ಉಪಯೋಗ ಮಾಡದೆ, ಎಲ್ಲರಿಗೂ ಒಳಿತನ್ನ ಬಯಸುವ ಮನಸಿರದೆ, ಸಮಯವನ್ನು ಉಪಯೋಗ ಮಾಡದೆ, ಹೀಗೆ ಎಲ್ಲಾ ಮಾಡಬಾರದನ್ನ ಮಾಡಿದ ನಿನಗೆ ನಾನು ಒಳಿತನ್ನು ಹೇಗೆ ಮಾಡಲಿ? ಕೈಮುಗಿದು ತಕ್ಷಣ ನನಗೆ ವರವನ್ನ ನೀಡುವುದಕ್ಕಾಗುವುದಿಲ್ಲ. ನೀನು ನಿನ್ನ ಜೀವನದಲ್ಲಿ ಸರಿಯಾದ ಹೆಜ್ಜೆಗಳನ್ನ ಸರಿಯಾದ ಸಮಯದಲ್ಲಿ ಗಟ್ಟಿ ನಿರ್ಧಾರದಿಂದ ತೆಗೆದುಕೊಂಡು ಮುಂದುವರೆದರೆ ನಾನು ನಿನಗೆ ಬೆಂಗಾಲಾಗಿರುತ್ತೇನೆ. ಇಲ್ಲದಿದ್ದರೆ ನಿನ್ನನ್ನು ನಿನ್ನ ಪಾಡಿಗೆ ಬಿಟ್ಟು ಬದಿಗೆ ಸರಿಯುತ್ತೇನೆ. ಭಗವಂತನ ಎಚ್ಚರಿಕೆಯ ಮಾತು ಎದೆಯೊಳಗೆ ಭಯವನ್ನ ಹುಟ್ಟಿಸಿತು. ದೇವರ ಭಯವೇ ಜ್ಞಾನದ ಆರಂಭ ಅಲ್ಲವೇ?
ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ