ಸ್ಟೇಟಸ್ ಕತೆಗಳು (ಭಾಗ ೧೩೭೩) - ಹಕ್ಕಿಯಾಗು

ಸ್ಟೇಟಸ್ ಕತೆಗಳು (ಭಾಗ ೧೩೭೩) - ಹಕ್ಕಿಯಾಗು

ನೀನು ಹಕ್ಕಿಯಾಗಿ ಬಿಡು. ಅದ್ಯಾಕೆ? ಅದು ಆಹಾರಕ್ಕೆ ಒಂದೇ‌ ಸ್ಥಳವನ್ನ ನಂಬಿಕೊಳ್ಳಬೇಕೆಂದಿಲ್ಲ. ಒಂದೇ ಮರದ ಮೇಲೆ ಕೂತು ಮರ ಹಣ್ಣು ಕೊಡಬಹುದೆಂದು ಕಾಯುತ್ತಾ ಕೂರುವುದಿಲ್ಲ. ಸ್ವಲ್ಪ ಸಮಯ ಮರದ ಬಳಿ ಕುಳಿತು ನೋಡುತ್ತದೆ ತನ್ನ ಹೊಟ್ಟೆ ತುಂಬುವಷ್ಟು ಆಹಾರ ಅಲ್ಲಿ ಸಿಗುವುದಿಲ್ಲ ನನ್ನ ಮುಂದಿನ ಬದುಕಿಗೆ ಶೇಖರಣೆ ಸಾಕಾಗುತ್ತಿಲ್ಲ ಅನ್ನಿಸಿದಾಗ ಆ ಮರವನ್ನ ತೊರೆದು ಹಾರಿಬಿಡುತ್ತದೆ. ಎಷ್ಟು ದೂರವಾದರೂ ಸರಿ ತನ್ನ ಹೊಟ್ಟೆ ತುಂಬ ಬೇಕು ಮಳೆಗಾಲದ ಸಂದರ್ಭದಲ್ಲಿ ಆಹಾರ ಶೇಖರವಾಗಬೇಕು, ಅಷ್ಟು ಆಹಾರವನ್ನು ಹುಡುಕುತ್ತದೆ. ಯಾರನ್ನು ನಂಬಿ ಕೂರುವುದಿಲ್ಲ. ಅದಕ್ಕೆ ತನ್ನ ರೆಕ್ಕೆಗಳ ಮೇಲೆ ನಂಬಿಕೆ ಇದೆ. ಆಹಾರವನ್ನ ಹುಡುಕುತ್ತೇನೆ ಅನ್ನುವ ಛಲ ಇದೆ ಹಾಗಾಗಿ ಹಕ್ಕಿ ಹಾರುತ್ತಾನೆ ಇರುತ್ತದೆ. ನಮಗೆ ಹೆಚ್ಚಾಗಿ ಹಕ್ಕಿಗಳು ಹಾರುವುದೇ ಕಾಣುತ್ತಿರುತ್ತದೆ. ನೀನು ಹಾರಲೇಬೇಕು ಕುಳಿತಲ್ಲಿಗೆ ಯಾರು ಆಹಾರ ತಂದುಕೊಡುವುದಿಲ್ಲ. ರಾಜೀವರ ಮಾತು ರಮೇಶನ ಮನಸ್ಸಿನೊಳಗೆ ಪ್ರತಿಧ್ವನಿಸುತ್ತಿತ್ತು ನಿರ್ಧಾರ ತೆಗೆದುಕೊಳ್ಬೇಕೋ ಬೇಡವೋ ಅನ್ನುವ ಯೋಚನೆಯಲ್ಲಿಯೇ ದಿನ ದಾಟಿಸುತ್ತಿದ್ದವನಿಗೆ ಒಂದಷ್ಟು ಧೈರ್ಯ ಬಂತು.

ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ