ಸ್ಟೇಟಸ್ ಕತೆಗಳು (ಭಾಗ ೧೩೭೭) - ಅಯ್ಯೋ!

ಸ್ಟೇಟಸ್ ಕತೆಗಳು (ಭಾಗ ೧೩೭೭) - ಅಯ್ಯೋ!

ಹೋರಾಟದ ಮಾತನಾಡಿದರು. ಸೇರಿದ ಎಲ್ಲರೊಳಗೂ ವಿರೋಧ ಮಾಡಲೇಬೇಕೆನ್ನುವ ಛಲ ತುಂಬಿದರು. ವಿರೋಧಿಗಳನ್ನು ಕೊಲ್ಲುವುದೇ ಸಾಧನೆ ಎಂಬಂತೆ ಪ್ರತಿಯೊಬ್ಬರಿಗೂ ಕರೆ ನೀಡಿದರು. ನಾವೆಲ್ಲರೂ ಒಟ್ಟಾಗಿ ನಿಂತರೆ ಎದುರಾಳಿ ಓಡಿ ಹೋಗುತ್ತಾನೆ ಗೆಲುವು ನಮ್ಮದೆಂದರು. ಇದನ್ನೇ ನಂಬಿದ್ದ ಕೆಲವು ಮನಸ್ಸುಗಳು ಹೋರಾಟಕ್ಕೆ ದುಮುಕಿಯೇ ಬಿಟ್ಟರು. ಹಾಗೆಯೇ ಬರುವ ದಾರಿಯಲ್ಲಿ ಕಾದು ಕುಳಿತು ವಿರೋಧಿಗಳನ್ನ ಅಟ್ಟಾಡಿಸಿ ಹೊಡೆದು ಸಾಯಿಸಿ ಬಿಟ್ಟರು. ಇವರು ಸಾಯಿಸಿದರೆ ಪರಿಣಾಮ ಎದುರಾಳಿಗಳು ಇವರ ಮೇಲೆ ಅಕ್ರಮಣ ಮಾಡಿದರು, ಕೆಲವರು ಜೀವ ಹೋಯಿತು, ಕೆಲವರು ಇನ್ನೂ ಏಳಲಾರದ ಸ್ಥಿತಿಗೆ ತಲುಪಿಬಿಟ್ಟರು. ಅಲ್ಲಿ ವೇದಿಕೆಯ ಮೇಲೆ ನಿಂತು ಮಾತನಾಡಿದವರು  ಎತ್ತರದ ಬೆಟ್ಟ ಗುಡ್ಡಗಳ ಪ್ರವಾಸ ಮಾಡುತ್ತಿದ್ದಾರೆ, ಇನ್ನೊಬ್ಬರು ವಿದೇಶದಲ್ಲಿ ಕುಟುಂಬ ಸಮೇತರಾಗಿ ತಿರುಗಾಡುತ್ತಿದ್ದಾರೆ, ಇನ್ನುಳಿದ ಕೆಲವರು ಅವರವರ ಮನೆಯಲ್ಲಿ ಆರಾಮವಾಗಿದ್ದಾರೆ, ಅವರ ಮಕ್ಕಳು ದೊಡ್ಡ ಗಾಡಿಗಳಲ್ಲಿ ತಿರುಗಾಡುತ್ತಿದ್ದಾರೆ. ಅವನ ಕಣ್ಣೀರು ಒರೆಸುವುದಕ್ಕೆ ಯಾರು ಇಲ್ಲದೆ ತನ್ನ ಕಾಲ ಮೇಲೆ ಬಿದ್ದಿರುವ ಕಂಬಳಿಯನ್ನು ಮೇಲೆತ್ತುಕೊಳ್ಳಲಾಗದ ಸ್ಥಿತಿಗೆ ಆತ ತಲುಪಿಟ್ಟಿದ್ದಾನೆ.

ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ