ಸ್ಟೇಟಸ್ ಕತೆಗಳು (ಭಾಗ ೧೩೭೯) - ಗುಲಾಬಿ

ಅವನ ಕೈ ಕಾಲುಗಳ ಮೇಲೆ ಅಂಟಿರುವ ಮಣ್ಣನ್ನು ಗಮನಿಸಿದಾಗ, ಬಣ್ಣವನ್ನ ಕಳೆದುಕೊಂಡು ಮಾಸಿರುವ ಬಟ್ಟೆಯನ್ನ ಗಮನವಿಲ್ಲದ ಅವನ ಕೈಯಲ್ಲಿ ಹಿಡಿದಿರಬಹುದು. ಯಾರಿಗೂ ಖರೀದಿಸುವ ಮನಸ್ಸು ಬಾರಲಿಕ್ಕಿಲ್ಲ. ಕಾಲಿನಲ್ಲಿ ಕೊಳೆಗಳು ಹೆಚ್ಚಾಗಿದೆ ಮುಖದಲ್ಲಿ ಪಕ್ಕದಲ್ಲಿ ಹಸಿವಿನ ಬಣ್ಣವೇ ಎದ್ದು ಕಾಣುತ್ತಿದೆ ಕಣ್ಣುಗಳು ದೈರ್ಯನ್ಯತೆಯಿಂದ ಬೇಡುತ್ತಿದೆ ಕೈಯಲ್ಲಿ ಮಾರಾಟಕ್ಕೆ ಕಾದು ಕುಳಿತವೇ ಆತ ಅಂಗಡಿಯ ಮುಂದೆ ಓಡಾಡುವ ಎಲ್ಲರ ಮುಂದೆ ಬೇಡುತ್ತಿದ್ದಾನೆ ಒಬ್ಬರ ಬಳಿಗೆ ಕೈಚಾಚಿ ಅನ್ನವನ್ನು ಕೇಳುತ್ತಿಲ್ಲ ಬದಲಾಗಿ ತನ್ನಲ್ಲಿರುವುದನ್ನ ತನ್ನಲಿರುವುದನ್ನ ಮಾರಾಟ ಮಾಡಿ ಅದಕ್ಕೆ ಬದಲಾಗಿ ದುಡ್ಡನ್ನ ಕೇಳುತ್ತಿದ್ದಾನೆ ನಿನ್ನ ತಬಸ್ಸುಗಳ ಪಕ್ಕದಲ್ಲಿ ಎಲ್ಲಾ ಹಾದು ಹೋಗಿ ನಿಮ್ಮವರಿಗೆ ಪ್ರೀತಿಯಿಂದ ಈ ಗುಲಾಬಿಯನ್ನು ನೀಡಿ ಅವರ ನಗುವಿನ ಖುಷಿ ಇದಿಯಲ್ಲ ಅದು ನನ್ನ ಹೊಟ್ಟೆ ತುಂಬಬಹುದು ನಿಮ್ಮ ಮಡದಿಗೂ ಗೆಳತಿಗೊ ಗೆಳೆಯನಿಗೂ ಯಾರಿಗಾದರೂ ಈ ಗುಲಾಬಿಯನ್ನ ಕೊಟ್ಟು ನೋಡಿ ಅವರ ಬದುಕಿನ ಸಂಭ್ರಮ ನನ್ನ ಒಂದು ಕ್ಷಣದ ನೋವನ್ನ ಮರೆಸಬಹುದು ನನಗೆ ಇದರಿಂದ ದೊಡ್ಡ ಮನೆಯನ್ನು ಕಟ್ಟುವ ಆಸೆ ಇಲ್ಲ ಆದರೆ ಹಸಿವು ನೀಗಬೇಕಾಗಿದೆ ಕಷ್ಟಪಟ್ಟು ವಿಜ್ಞಾಪಿಗಳನ್ನ ತಂದಿದ್ದೇನೆ ಈ ಗುಲಾಬಿಯನ್ನ ಮಾರಾಟ ಮಾಡಿದರೆ ಹೊಟ್ಟೆಗೆ ಏನಾದರೂ ತಿನ್ನಬಹುದು ಮನೆಗೊಂದಿಷ್ಟು ಒಯ್ಯಬಹುದು ಅಲ್ಲಿ ಹಸಿವಿನಿಂದ ಕುಳಿತ ದೇಹಗಳಿಗೆ ಒಂದಷ್ಟು ನೆಮ್ಮದಿ ನೀಡ ನೆಮ್ಮದಿ ನೀಡಬಹುದು ದಯವಿಟ್ಟು ಖರೀದಿಸಿ ಗುಲಾಬಿಗಳು ಸೂರ್ಯನ ಶಾಖಕ್ಕೆ ಅವನ ಮುಖದಂತೆ ಬಾಡುತ್ತಿವೆ. ಗುಲಾಬಿಗಳು ಕಾಯುತ್ತಿದೆ ತಾನು ಯಾರದೋ ಮೂಡಿಗೇರಿ ಇವನ ಹಸಿವು ನೀಗಿಸುವುದಕ್ಕೆ...
ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ