ಸ್ಟೇಟಸ್ ಕತೆಗಳು (ಭಾಗ ೧೩೮೦) - ಸಂದೇಶ

ನಾನು ಮೆಸೇಜ್ ಅನ್ನ ಕಳುಹಿಸಿ ಬಿಟ್ಟಿದ್ದೆ. ತುಂಬಾ ಯೋಚನೆ ಕೂಡ ಮಾಡಿರಲಿಲ್ಲ. ಅದರ ಸಾಧಕ ಬಾದಕಗಳನ್ನ, ಸತ್ಯಾಸತ್ಯತೆಗಳನ್ನ ಎಣಿಸಿಯೂ ಇರಲಿಲ್ಲ ಸಮಾಜಕ್ಕೊಂದು ಸಂದೇಶ ನೀಡಬೇಕು ತಪ್ಪು ಮಾಡುವವರಿಗೆ ಶಿಕ್ಷೆ ಆಗಬೇಕು ಅನ್ನೋದಷ್ಟೇ ನನ್ನ ವಾದವಾಗಿತ್ತು. ಹಾಗಾಗಿ ನನ್ನ ಮೊಬೈಲಿಗೆ ಬಂದ ಮೆಸೇಜನ್ನು ಹಾಗೆ ದಾಟಿಸಿಬಿಟ್ಟಿದ್ದೆ. ಹಾಗೆಯೇ ದಾಟಿದ ಮೆಸೇಜುಗಳು ಒಂದರಿಂದ ನೂರು ಸಾವಿರ ಲಕ್ಷ ಮೊಬೈಲ್ ಗಳನ್ನು ತಲುಪಿಬಿಟ್ಟ ದಾಟಿದ ಪ್ರತಿಯೊಬ್ಬರು ಆ ಮೆಸೇಜ್ ನಲ್ಲಿದ್ದ ವ್ಯಕ್ತಿಯ ತಪ್ಪನ್ನು ಗುರುತಿಸುವವರಾಗಿದ್ದರು. ತನ್ನ ಬದುಕಿನಲ್ಲಿ ತನಗರವಿಲ್ಲದೆ ಆಗಿರುವ ಘಟನೆಗಳ ಬಗ್ಗೆ ಅರಿವಿರಲಿಲ್ಲ. ದಾರಿಯಲ್ಲಿ, ಕಾರ್ಯಕ್ರಮಗಳಲ್ಲಿ, ಊರಿನಿಂದ ಹೊರಗೆ ಹೋಗುವ ಹಾಗಿಲ್ಲ. ಯಾರೋ ಮೋಸದಿಂದ ಕಳುಹಿಸಿದ ಸಂದೇಶಕ್ಕೆ ಒಂದು ಜೀವ ಜೀವನ ಬೀದಿಗೆ ಬಿದ್ದಿದೆ. ತಪ್ಪು ನನ್ನದೇ ಅಲ್ವಾ? ನಾನೇ ಸಂದೇಶ ದಾಟಿಸಿದ್ದು, ನನ್ನದೂ ತಪ್ಪಿದೆ ನಿಮ್ಮದು…?
ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ