ಸ್ಟೇಟಸ್ ಕತೆಗಳು (ಭಾಗ ೧೩೮೧) - ಬೇಸರವಿಲ್ಲ

ಸ್ಟೇಟಸ್ ಕತೆಗಳು (ಭಾಗ ೧೩೮೧) - ಬೇಸರವಿಲ್ಲ

ನಿಜವಾಗಿಯೂ ನಾನಾಗಿದ್ದರೆ ಖಂಡಿತಾ ಬೇಸರಿಸಿಕೊಳ್ಳುತ್ತಿದ್ದೆ. ಆದರೆ ಅವನು ಹಾಗಲ್ಲ. ಆ ದಿನ ಸಂಜೆ ಅಂಗಡಿಯ ಜಗಲಿಯೊಂದರಲ್ಲಿ ಕುಳಿತಿದ್ದ. ನವರತ್ನ ಎಣ್ಣೆಯನ್ನು ಕಯಲ್ಲಿ ಹಿಡಿದು, ಕಾಲಿನ ಪಾದವ ಉಜ್ಜುತ್ತಿದ್ದ. ಗಾರೆ ಕೆಲಸದ ದುಡಿತಕ್ಕೆ ಪಾದಗಳು ಇಡೆದು ಒಳಗಿನ ಚರ್ಮ ನೆಲವನ್ನು ನೋಡುತ್ತಿವೆ. ನೋವಿನ ಪರಿಹಾರಕ್ಕೆ ಕಾಲಿಗೆ ನೋವಿನ ಮುಲಾಮು ಅಂಟಿಕೊಂಡಿದೆ. ಪಕ್ಕದಲ್ಲೇ ನಿಂತಿದೆ ಕಾರು. ಅದರೊಳಗೆ ಕುಳಿತು ಸಿಗರೇಟ್ ಸೇದುವವನ ವಯಸ್ಸು ತನ್ನಷ್ಟೇ. ಅವನ ಕಾರಿನೊಳಗೆ ಮಡದಿ ಮಕ್ಕಳ ಸಂಭ್ರಮದ ಮಾತುಕತೆ ನಡೆದಿದೆ. ಇವನ ಮಡದಿ ಮಕ್ಕಳು ಮನೆಯಲ್ಲಿ ಇವನ ಬರುವಿಕೆಗೆ ಕಾಯುತ್ತಿದ್ದಾರೆ. ದುಡಿಮೆಯ ಕೈಗಳೇ ಪ್ರತಿದಿನದ ಬದುಕು. ಕಾಲನ್ನ ಮತ್ತೆ ಜಾಡಿಸಿಕೊಂಡು ಹೆಚ್ಚಿನ ದುಡಿಮೆಗೆ ಮತ್ತೆ ಓಡಿದ್ದಾನೆ. ಬೇಸರವಿಲ್ಲ, ಬದುಕಿನ ಏರು ತಗ್ಗಿಗೆ ಬಂದದ್ದನ್ನ ಅನುಭವಿಸ್ತಾನೆ. ವರ್ತಮಾನವನ್ನು ಬೆನ್ನಿಗೇರಿಸಿ ನಡೆದಿದ್ದಾನೆ. ಒಂದಿನಿತೂ ಬೇಸರ, ಭಗವಂತನ ಮೇಲೆ ಕೋಪ, ವಿಧಿ ಹಣೆಬರಹ ಇದ್ಯಾವುದರ ಪರಿವೆ ಇಲ್ಲದೆ, ಎಷ್ಟು ಚಂದ ಅಲ್ವಾ..?

ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ