ಸ್ಟೇಟಸ್ ಕತೆಗಳು (ಭಾಗ ೧೩೮೨) - ಸರಿ ತಪ್ಪು

ಸ್ಟೇಟಸ್ ಕತೆಗಳು (ಭಾಗ ೧೩೮೨) - ಸರಿ ತಪ್ಪು

ನನಗೆ ಪ್ರಸಿದ್ಧಿಯ ಹುಚ್ಚು ಹೇಗಾದರೂ ಮಾಡಿ ಹೆಚ್ಚು ಜನ ನನ್ನನ್ನ ಅನುಸರಿಸಬೇಕು, ನಾನು ಅದ್ಭುತ ಅಂದುಕೊಳ್ಳಬೇಕು, ಆ ಕಾರಣಕ್ಕೆ ನಾನು ವಿಡಿಯೋಗಳನ್ನ ಮಾಡುತ್ತೇನೆ. ಶಾಲೆಯಲ್ಲಿ ಪಾಠ ಮಾಡುವ ಕಾರಣ ಮಕ್ಕಳನ್ನೇ ಉಪಯೋಗಿಸಿಕೊಂಡು ಮಕ್ಕಳಿಗೆ ಪಾಠ ಮಾಡುವುದನ್ನು ಮೊಬೈಲ್ ನಲ್ಲಿ ವಿಡಿಯೋ ಮಾಡ್ತಾ ಹೆಚ್ಚು ಜನರಿಗೆ ಹಂಚುತ್ತೇನೆ. ಹಾಗಾಗಿ ನಾನು ಪ್ರಸಿದ್ಧಿಗೂ ಬಂದಿದ್ದೇನೆ. ನನ್ನನ್ನು ಹಲವಾರು ಕಡೆ ಕರೆದಿದ್ದಾರೆ. ನಿಮಗೆ ನನ್ನ ನಿಜದ‌ ನಿಲುವಿನ ರೀತಿ ನಿಮಗೆ ತಿಳಿದಿಲ್ಲ. ಇತ್ತೀಚಿಗೆ ಮಕ್ಕಳಿಗೆ ಮೊಬೈಲ್ ಬಳಕೆಯ ಬಗ್ಗೆ ಸಂದೇಶ ಮುಟ್ಟಿಸಬೇಕು, ಅನ್ನುವ ಕಾರಣಕ್ಜೆ ಅಭಿನಯಿಸಿದೆ. ಕಣ್ಣಲ್ಲಿ ರಕ್ತ ಇಳಿದು, ಎರಡು ಕಣ್ಣುಗಳನ್ನು ಕಳೆದುಕೊಳ್ಳುವ ಭಯವನ್ನು ಹುಟ್ಟಿಸಿದ್ದೇನೆ. ಏಕೆಂದರೆ ಆ ಮಕ್ಕಳು ಮುಂದೆ ಬೆಳೆದು ದೊಡ್ಡವರಾಗುವವರು, ಮೊಬೈಲ್ ಬಳಸಿ ಅವರು ಹಾಳಾಗಬಾರದು ಅನ್ನುವ ನನ್ನ ಉದ್ದೇಶ. ಆದರೆ ಇದರಲ್ಲಿ ನಾನು ಮಾಡಿದ ತಪ್ಪೇನು? ಅಲ್ಲ ನಾನು ಇಷ್ಟು ದಿನ ಮಾಡಿದ ವಿಡಿಯೋ ಮೊಬೈಲ್ ನಲ್ಲಿ ನೋಡಬೇಕಿತ್ತು, ನಾನು ಪ್ರಸಿದ್ಧಿಗೆ ಬಂದಿರುವುದು ಕೂಡ ಮೊಬೈಲ್ ನಿಂದಲೇ ನಮಗೆ ಮೊಬೈಲ್ ಇಂದ ಬೇರೆ ಬೇರೆ ರೀತಿಯ ಉಪಯೋಗವೂ ಇದೆ. ಹಲವು ಜನ ಅದ್ಭುತ ದಾರಿಯನ್ನ ಕಂಡುಕೊಂಡಿದ್ದಾರೆ. ಹೀಗಿರುವಾಗ ಮಕ್ಕಳಲ್ಲಿ ನಾನು ಭಯ ಹುಟ್ಟಿಸಿರುವುದು ತಪ್ಪಲ್ವಾ? ನನಗೆ ಮೊಬೈಲ್ ಬಳಕೆಗಿಂತ ಬೇರೇನೆಲ್ಲ ದಾರಿಗಳಿವೆ ಅನ್ನೋದನ್ನ ತಿಳಿಸಿಕೊಡಬಹುದಿತ್ತಲ್ಲ, ನಾನು ತಪ್ಪಿದ್ದೇನಾ? ಸರಿ ಇದ್ದೆನಾ? ಗೊತ್ತಾಗ್ತಾ ಇಲ್ಲ ನೀವೇನ್ ಹೇಳ್ತೀರಿ?

ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ