ಸ್ಟೇಟಸ್ ಕತೆಗಳು (ಭಾಗ ೧೩೮೪) - ಅಮ್ಮ

ಸ್ಟೇಟಸ್ ಕತೆಗಳು (ಭಾಗ ೧೩೮೪) - ಅಮ್ಮ

ಅಮ್ಮಾ ನೀನ್ಯಾಕೆ‌ ಹೀಗೆ, ನಿನಗೂ ಬದುಕಿದೆ, ನಗುವಿದೆ, ಉಸಿರಿದೆ, ಹಸಿವಿದೆ ಎಲ್ಲವನ್ನ ಮರೆತು ಮಕ್ಕಳೇ‌ ಸರ್ವಸ್ವ ಅಂತ ಬದುಕ್ತೀಯಲ್ವಾ? ಮಕ್ಕಳು ದುಡಿತಿದ್ದಾರೆ, ಕಾಲ‌ಮೇಲೆ ನಿಂತಿದ್ದಾರೆ, ಬದುಕು ಕಟ್ಟಿಕೊಂಡಿದ್ದಾರೆ, ಮನೆ ಖರ್ಚಿಗೆ ಹಣ ನೀಡ್ತಾರೆ ಎಲ್ಲವೂ ಇರುವಾಗ ಕೆಲವೊಂದು ತಿಂಗಳು ಖರ್ಚು ಹೆಚ್ಚಾಗಿ ಮಕ್ಕಳ ಕೈ ಕಟ್ಟುತ್ತೆ, ಆಗ ನಿನ್ನ ತಿಂಗಳ ಉಳಿತಾಯಕ್ಕೆ ಮದ್ದಿಗೆ ಅಂತ ತೆಗೆದಿಟ್ಟ ಅಲ್ಪ ದುಡ್ಡನ್ನೂ ಮಕ್ಕಳ ಮುಂದೆ ತಳ್ತೀಯಲ್ವಾ? ನಿನಗೆ... ಅವರು ಅದನ್ನ ನಿಭಾಯಿಸ್ತಾರೆ, ಅದು ನಿನ್ನಲ್ಲೇ ಇರಲಿ... ನೀನು ಅದನ್ನ ಕೇಳುವುದೇ ಇಲ್ಲ... ಮಕ್ಕಳ ನೆಮ್ಮದಿಗೆ ಎಲ್ಲ ತೊಂದರೆಯಾಗುತ್ತೋ ಅನ್ನೋ ಭಯ. ಒಂದು ದಿನದ ಉಪವಾಸ ದೊಡ್ಡದ್ದಲ್ಲ, ಆರೋಗ್ಯದ ಚಿಂತೆಯಿಲ್ಲ... ಹೀಗೆ ಮಕ್ಕಳೇ ಬದುಕಾದರೆ ನಿನ್ನ ಬದುಕು ಹೇಗೆ... ಅಮ್ಮ ನಗ್ತಾರೆ...ಮಕ್ಕಳಲ್ವೇ‌ ನನ್ನ. ಬದುಕು ಹಣ್ಣೆಲೆ ಉದುರುತ್ತದೆ ಇರುವಷ್ಟು ದಿನ ಮರಕ್ಕೆ ಆಹಾರ ನೀಡಿ ಉದುರಿ ಹೋಗ್ತೇನೆ… ನನ್ನಲ್ಲಿ ಮುಂದಿನ‌ ಮಾತುಗಳಿಗೆ ಪದವೇ ಇರಲಿಲ್ಲ.

ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ