ಸ್ಟೇಟಸ್ ಕತೆಗಳು (ಭಾಗ ೧೩೮೮) - ತಪ್ಪು ಯಾರದ್ದು?

ಸ್ಟೇಟಸ್ ಕತೆಗಳು (ಭಾಗ ೧೩೮೮) - ತಪ್ಪು ಯಾರದ್ದು?

ನಮ್ಮ ಮನೆಗೆ ಕಬ್ಬಿಣದ ಗೇಟುಗಳನ್ನು ಹಾಕಿದ್ದೇನೆ. ಅದಕ್ಕೆ ಗಟ್ಟಿಯಾಗಿ ಬೇಗವನ್ನು ಜಡಿದಿದ್ದೇನೆ, ಆದರೆ ನಾನು ಹಾಕಿರುವ ಗೇಟನ್ನು ಗಮನಿಸದೆ ಬೀಗವನ್ನು ನೋಡದೆ ರಸ್ತೆಯಲ್ಲಿ ಹರಿಯುತ್ತಿದ್ದ ನೀರೆಲ್ಲವೂ ತುಂಬಿ ಮನೆ ಅಂಗಳಕ್ಕೆ ಕಾಲಿಟ್ಟಿದೆ. ಆ ನೀರಿಗೆ ಸರಿಯಾಗಿ ಗಮನಿಸುವುದಕ್ಕಾಗುವುದಿಲ್ಲವೇ? ಗೇಟನ್ನು ಗಮನಿಸದೆ ಮನೆಯೊಳಕ್ಕೆ ಕಾಲಿಟ್ಟ ಆ ನೀರಿನ ಮೇಲೆ ನಾನು ಕೇಸು ಹಾಕುವವನಿದ್ದೇನೆ, ಈ ಕೇಸಿನಲ್ಲಿ ನನ್ನ ಪರವಾಗಿ ಗೆಲುವು ಬರುತ್ತದೆ ಎನ್ನುವ ನಂಬಿಕೆ ನನ್ನದು. ಆದರೂ ಗೇಟು ಹಾಕಿ ಬೀಗ ಹಾಕಿದ ಕಾರಣಕ್ಕೆ ನೀರು ಒಳಗೆ  ಬಂದಿದ್ದರೂ, ಸ್ಥಳಾವಕಾಶ ಸಿಕ್ಕಿದೆ ಹಾಗಾಗಿ ಒಳಗೆ ಬಂದಿದೆ ಅದಲ್ಲದೆ ನೀರು ಹರಿಯುವುದಕ್ಕೆ ಸರಿಯಾದ ವ್ಯವಸ್ಥೆ ಮಾಡಿಕೊಡದೆ ನನ್ನ ಮನೆಯೊಳಕ್ಕೆ ಬರುವ ಹಾಗೆ ಮಾಡಿಕೊಂಡವನು ನಾನೇ, ಗೋಡೆ ಕಟ್ಟಿ ನೀರು ಬರದ ಹಾಗೆ ನಿಲ್ಲಿಸುವುದನ್ನು ಬಿಟ್ಟು ಸರಳು ಮಾಡಿ ನೀರು ಬರಬಾರದು ಅಂತ ಅಂದ್ರೆ ತಪ್ಪು ನನ್ನದೇ ಹೌದಾ.... ನನ್ನ ಮನಸ್ಸಿನ ಒಳಗೆ ಆಗಾಗ ಕೆಟ್ಟ ಆಲೋಚನೆಗಳು ನುಗ್ತಾ ಇದೆ ....ಇಲ್ಲಿ ತಪ್ಪು ಯಾರದ್ದು? ಆಲೋಚನೆಗಳದ್ದಾ... ನನ್ನದಾ ?

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ