ಸ್ಟೇಟಸ್ ಕತೆಗಳು (ಭಾಗ ೧೩೮೯) - ದುರಂತ

ಸ್ಟೇಟಸ್ ಕತೆಗಳು (ಭಾಗ ೧೩೮೯) - ದುರಂತ

ವೈದ್ಯರ ಕೈಗಳು ನಡುಗುತ್ತಿವೆ. ಇಷ್ಟರವರೆಗೂ ಆ ತರಹದ ಘಟನೆಯನ್ನ ಅವರು ನೋಡಿಲ್ಲ, ಪುಟ್ಟ ಹೆಣ್ಣು ಮಗು ಬದುಕನ್ನು ಕಾಣುವುದಕ್ಕೆ ಇನ್ನೊಂದಷ್ಟು ಸಮಯವಿದೆ. ಕೆಲವು ವರ್ಷದ ಹಿಂದೆ ಅದೇ ಮಗುವನ್ನ ತಾಯಿಯ ಹೊಟ್ಟೆಯಿಂದ ಹೊರತೆಗೆದು ಮುದ್ದಾಡಿದ್ರು. ಅದೇ ವೈದ್ಯರು ಇದೀಗ ಮಗು ಉಸಿರನನ್ನು‌ ಉಳಿಸಲು ಪ್ರಯತ್ನಿಸುತ್ತಿದ್ದಾರೆ.   ದೇಹದ ತುಂಬೆಲ್ಲ ಪರಚಿದ ಗಾಯಗಳು, ಅಲ್ಲಲ್ಲಿ‌ ಕಚ್ಚಿರುವ ಗುರುತು, ಹೇಳಲಾರದ ಕಡೆ ರಕ್ತ ಇಳಿಯುತ್ತಿದೆ, ಇಷ್ಟೆಲ್ಲ ವಿಕೃತವಾಗಿ ಪುಟ್ಟ ಮಗುವನ್ನು ಅತ್ಯಾಚಾರ ಮಾಡಿದ ಸೂಚನೆ ಕಾಣುತ್ತಿದೆ. ಮಗುವನ್ನು ಉಳಿಸುವುದಕ್ಕೆ ಎಷ್ಟು ಪ್ರಯತ್ನ ಪಟ್ಟರು ಭಗವಂತನೇ ಕರೆದುಕೊಂಡುಬಿಟ್ಟ. ಮನೆಯಲ್ಲಿರುವ ತನ್ನ ಮಗಳ ಬಗ್ಗೆ ಹೆದರಿಕೆ ಉಂಟಾಗುತ್ತಿದೆ. ಈ ಪುರುಷ ಮನಸ್ಥಿತಿಯ ಬಗ್ಗೆ ಅಸಹ್ಯ ಹೆಚ್ಚುತ್ತಿದೆ ತಪ್ಪು ಮಾಡಿದವರನ್ನು ಸಾಕ್ಷಿ ಮಹಜರು ಅಂತ ಸಮಯ ದೂಡಿದೂಡಿ ಕೊನೆಗೊಂದು ದಿನ ಜೈಲು ಶಿಕ್ಷೆಯನ್ನ ಘೋಷಿಸಿ ಬಿಡುತ್ತಾರೆ. ನೋವನುಭವಿಸಿದವರು ಜೀವನ ಪೂರ್ತಿ ಸಾಯುತ್ತಾರೆ. ಕಾಮದ ಕೆಲಸ ಮಾಡಿದವರಿಗೆ ಆ ತಪ್ಪಿನ ಭಯವೇ ಹುಟ್ಟುವುದಿಲ್ಲ. ಭಯ ಹುಟ್ಟದೆ ಹೋದರೆ ಇಂತಹ ಘಟನೆಗಳು ಮತ್ತೆ ಮತ್ತೆ ಘಟಿಸಬಹುದು, ಮನೆಯ ಮಗುವನ್ನ ಹೊಸಿಲು ದಾಟಿಸಲು ಹೆದರುವ ಪರಿಸ್ಥಿತಿ ಬರಬಹುದು .ಯಾರಲ್ಲಿ ಎಷ್ಟು ಗೋಗರೆದರೂ ಪರಿಸ್ಥಿತಿ ಬದಲಾಗದನ್ನು ಕಂಡು ಸುಮ್ಮನಾಗಿ ಬಿಟ್ಟರು... ಬದುಕಿಸಲು ಪ್ರಯತ್ನ ಪಡುವ ವೈದ್ಯರಿಗೆ ಸಾವೇ ಸೂಕ್ತ ಅಂತ ಅನಿಸಲಾರಂಬಿಸಿದೆ.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ