ಸ್ಟೇಟಸ್ ಕತೆಗಳು (ಭಾಗ ೧೩೯೦) - ಆಶ್ರಮ

ಇಲ್ಲ ಸರ್, ಹಾಗೇನಿಲ್ಲ. ನನ್ನ ಮಕ್ಕಳು ತುಂಬಾ ಒಳ್ಳೆಯವರು, ಇಲ್ಲಿ ನಿಲ್ಲೋದಕ್ಕೆ ಹೇಳಿದ್ದಾರೆ ಅಷ್ಟೇ, ನಾನು ಇಲ್ಲಿಗೆ ಬಂದು ಮೂರು ತಿಂಗಳ ಒಳಗೆ ಕರೆದುಕೊಂಡು ಹೋಗುತ್ತೇನೆ ಅಂತ ಹೇಳಿದ್ದಾರೆ, ಅವರು ಖಂಡಿತ ಬರುತ್ತಾರೆ, ನಮ್ಮ ಮಕ್ಕಳ ಬಗ್ಗೆ ಗೊತ್ತಿದೆ, ನಾನು ಅವರು ಸಣ್ಣವರಿರುವಾಗ ಆರೋಗ್ಯ ಕೆಟ್ಟ ಕಾರಣಕ್ಕೆ ಸಾಲ ಮಾಡಿದ್ದೇನೆ, ರಾತ್ರಿ ಹಗಲು ದುಡಿದಿದ್ದೇನೆ, ಶಿಕ್ಷಣಕ್ಕಾಗಿ ನಿದ್ದೆ ಬಿಟ್ಟಿದ್ದೇನೆ, ಒಳ್ಳೆ ಕೆಲಸ ಸಿಗೋ ಹಾಗೆ ಮಾಡಿದ್ದೇನೆ, ಮದುವೆ ಕೂಡ ಮಾಡಿಸಿದ್ದೇನೆ, ಇಷ್ಟೆಲ್ಲ ಮಾಡಿಸಿದ ಮೇಲೆ ಮಕ್ಕಳು ನನ್ನ ಇಲ್ಲಿ ಬಿಟ್ಟು ಹೋಗ್ತಾರಾ? ಸಾಧ್ಯನೇ ಇಲ್ಲ. ನನ್ನ ಮಕ್ಕಳಂತವರಲ್ಲಪ್ಪ. ನಾನವರಿಗೆ ಸಂಸ್ಕಾರ ಕಲಿಸಿದ್ದೇನೆ. ನನ್ನ ಮಕ್ಕಳು ಎಂತವರು ಅಂತ ಗೊತ್ತು. ಇಲ್ಲಿರುವ ಕೆಲವರ ಮಕ್ಕಳೆಲ್ಲ ಅವರನ್ನ ತಂದೆ ತಾಯಿಗಳನ್ನು ಬಿಟ್ಟು ಹೋಗಿರಬಹುದು, ಮನೆಯೊಳಗೆ ನಡೆದ್ಬಿಟ್ರು ನಾನು ಹೊರಡುವ ಕ್ಷಣದಲ್ಲಿ ಆ ವೃದ್ಧಾಶ್ರಮವನ್ನು ನೋಡಿಕೊಳ್ಳುತ್ತಿದ್ದ ಮ್ಯಾನೇಜರ್ ಬಂದು ಎಲ್ಲರತ್ರ ಹೀಗೇನೇ ಹೇಳುತ್ತಾರೆ ಮೂರು ತಿಂಗಳಲ್ಲಿ ಬರ್ತೇನೆ ಅಂತ ಹೇಳಿದವ 3 ವರ್ಷವಾದರೂ ಸುದ್ದಿ ಇಲ್ಲ ಏನ್ ಹೇಳೋದ್ ಇವರಿಗೆ. ನಾನು ಉತ್ತರವಿಲ್ಲದ ಪ್ರಶ್ನೆ ಒಂದನ್ನು ಹಿಡಿದು ಆಶ್ರಮವನ್ನು ನೋಡುತ್ತಾ ಹೊರಟುಬಿಟ್ಟೆ.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ