ಸ್ಟೇಟಸ್ ಕತೆಗಳು (ಭಾಗ ೧೪೦೫) - ಕಮಲಕ್ಕ

ಅವರ ಸಾಮಾಜಿಕ ಮಾಧ್ಯದಲ್ಲಿ ದಿನವೂ ಪ್ರಾಣಿಗಳ ಜೊತೆಗಿನ ಅವಿನಾಭಾವ ಸಂಬಂಧದ ವೀಡಿಯೋ ಓಡಾಡುತ್ತೆ. ಕಷ್ಟದಲ್ಲಿ ಇರುವ ಪ್ರಾಣಿಗಳನ್ನ ಉಳಿಸುವ ಪೋಟೋ ಮತ್ತೆ ಮತ್ತೆ ಕಾಣ ಸಿಗುತ್ತೆ. ಸದಾ ಸುದ್ದಿಯಲ್ಲಿ ಇರುವವರನ್ನ ಗೌರವಿಸುವ ದೊಡ್ಡವರು ಹುಡುಕಿ ಬರ್ತಾರೆ. ಅದೇ ಬೀದಿಯ ಕೊನೆಯ ಸಾಲಿನ ಕಮಲಕ್ಕನ ಮನೆಯಲ್ಲಿ ಇರೋದು ಒಬ್ಬರಾದರೂ ಅಡುಗೆ ಕೋಣೆಯಲ್ಲಿ ಬೆಂಕಿ ಉರಿಯೋದು ನಿಲ್ಲುವುದಿಲ್ಲ. ಬೀದಿಯ ನಾಯಿಗಳು ಹೊಟ್ಟೆ ತುಂಬಾ ತಿಂದು ಮಲಗುತ್ತಿವೆ. ಆರೋಗ್ಯ ತಪ್ಪಿದಾಗ, ಅಪಘಾತವಾದಾಗ ಕಮಲಕ್ಕ ಓಡಿ ಬರುತ್ತಾರೆ. ಅವರು ಒಂದು ದಿನವೂ ಮಾಧ್ಯಮದಲ್ಲಿ ಕಂಡವರಲ್ಲ, ಸನ್ಮಾನಗಳು ಹುಡುಕಿ ಬಂದಿಲ್ಲ. ಆ ಬಗ್ಗೆ ಯೋಚನೆಯೂ ಮಾಡಿದವರಲ್ಲ. ಬೀದಿ ಬದಿಯ ಪ್ರಾಣಿಗಳು ನೆಮ್ಮದಿಯಿಂದ ಮಲಗಿರುವುದು ಕಮಲಕ್ಕನ ಪ್ರೀತಿಯಿಂದಲೇ ಹೊರತು ಸಮಾಜಿಕ ಮಾಧ್ಯಮದಿಂದಲ್ಲ..
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ