ಸ್ಟೇಟಸ್ ಕತೆಗಳು (ಭಾಗ ೧೪೧೩) - ಶ್ಯಾವಿಗೆ

ಸ್ಟೇಟಸ್ ಕತೆಗಳು (ಭಾಗ ೧೪೧೩) - ಶ್ಯಾವಿಗೆ

ಹಾದಿ ತಪ್ಪುತ್ತಿರುವ ನನಗೆ ಆಗಾಗ ಯಾರಾದರೂ ಸರಿದಾರಿಯನ್ನು ತೋರಿಸಲೇಬೇಕು ಇವತ್ತು ಊಟ ಮಾಡ್ತಾ ಇರುವಾಗ ಅಲ್ಲ ಬೆಳಗ್ಗಿನ ತಿಂಡಿ ತಿಂತಾ ಇರುವಾಗ ತಟ್ಟೆಯಲ್ಲಿದ್ದ ಶಾವಿಗೆ ಬದುಕಿನ ಪಾಠ ಹೇಳಿ ಕೊಡ್ತು. ನೋಡು ನಾನು ಮೂಲ ರೂಪದಲ್ಲಿ ಕಡುಬಾಗಿದ್ದೆ ಆಗ ನನಗೆ ಸಿಗ್ತಾ ಇದ್ದ ಮರ್ಯಾದೆಗಿಂತ ಈಗ ಶ್ಯಾವಿಗೆಯಾಗಿ ರೂಪ ಬದಲಿಸಿಕೊಂಡ ಮೇಲೆ ನನ್ನ ಗೌರವ ಹೆಚ್ಚಾಗಿದೆ ನನ್ನ ಮೌಲ್ಯ ಹೆಚ್ಚಾಗಿದೆ. ನೀನು ನಿನ್ನ ರೂಪದಲ್ಲಿ ಹೇಗಿದ್ಯೋ ನಿನ್ನ ವ್ಯಕ್ತಿತ್ವ ಹೇಗಿದ್ಯೋ ಹಾಗೆ ಉಳಿದುಬಿಟ್ಟರೆ ಸಮಾಜ ನಿನ್ನನ್ನು ಗುರುತಿಸುವುದಿಲ್ಲ. ಒಂದಷ್ಟು ಬದಲಾಗು ಹೊಸ ಹೊಸ ವಿಚಾರಗಳನ್ನು ಅಳವಡಿಸಿಕೋ ನಿನ್ನ ರೂಪವನ್ನು ಬದಲಿಸಿ ಸಮಾಜದ ಮುಂದೆ ಪ್ರವೇಶಿಸಿದಾಗ ನಿನ್ನನ್ನು ಗೌರವಿಸುತ್ತಾರೆ. ಜೊತೆಗೆ ಈ ಶಾವಿಗೆಗೆ ಯಾವುದೋ ಸಾಂಬಾರನ್ನು ಹಾಕಿಕೊಂಡರೆ ರುಚಿಸುವುದಿಲ್ಲ ಅದಕ್ಕೆ ತಕ್ಕನಾದ ರಸಾಯನವೋ ಕೋಳಿ ಸಾರೋ ಜೊತೆಗಿರಲೇಬೇಕು ಹಾಗೆ ನಾವು ನಮ್ಮ ವ್ಯಕ್ತಿತ್ವವನ್ನ ಉನ್ನತೀಕರಿಸಿಕೊಂಡಾಗ ನಮ್ಮ ಜೊತೆಗೆ ಯಾರಿರಬೇಕು ಅನ್ನೋದನ್ನು ಕೂಡ ತೀರ್ಮಾನಿಸುವವರು ನಾವೇ ಆಗಬೇಕು. ಶ್ಯಾವಿಗೆ ಹೊಟ್ಟೆ ಸೇರಿತು, ವಿಷಯ ಮನಸ್ಸನ್ನು. ಇನ್ನು ಬದಲಾಗಬೇಕಾಗಿರೋದು ನಾನು.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ