ಸ್ಟೇಟಸ್ ಕತೆಗಳು (ಭಾಗ ೧೪೧೬) - ಬದುಕು

ಸ್ಟೇಟಸ್ ಕತೆಗಳು (ಭಾಗ ೧೪೧೬) - ಬದುಕು

ನನ್ನ ಮಾತನ್ನು ನಿನಗೆ ಒಪ್ಪಿಕೊಳ್ಳುವುದಕ್ಕೆ ಏನು? ರಾಜ ರಾಮರ ಮಾತು ಸ್ವರ ಏರಿಸಿದ ಹಾಗಿದ್ದರೂ ಬೇಡಿಕೆ ಇತ್ತು ಮಗಳ ಮುಂದೆ. ಮಗಳು ಪ್ರೀತಿಸಿದ ಹುಡುಗನ ಜೊತೆ ಮದುವೆಗೆ ತಂದೆಯ ಒಪ್ಪಿಗೆ ಸಿಗುತ್ತಿಲ್ಲ. ತಂದೆಗೆ ತಾನು ಹೇಳಿದ ಹಾಗೆ ಮಗಳು ಕೇಳಬೇಕಂಬ ಹಠ. ಅವರ ಪ್ರಕಾರ ಮಗಳಿಗೆ ಬದುಕು ಅರ್ಥವಾಗಲ್ಲ, ಇವರಂದುಕೊಂಡಂತೆ ಮಗಳು ಬದುಕಬೇಕು. ಅವರಿಗೆ ಕೊನೆಗೂ ಅರ್ಥವಾಗಲಿಲ್ಲ ಮಕ್ಕಳನ್ನು ಬೆಳೆಸಬಹುದು, ಪಾಲಿಸಬಹುದು, ಆಲಿಸಬಹುದು, ಆದರೆ ಮಕ್ಕಳ ಜೀವನವನ್ನ ಜೀವಿಸಕ್ಕಾಗೋದಿಲ್ಲವೆಂದು.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ