ಸ್ಟೇಟಸ್ ಕತೆಗಳು (ಭಾಗ ೧೪೨೫) - ಪಾಠ

ಸ್ಟೇಟಸ್ ಕತೆಗಳು (ಭಾಗ ೧೪೨೫) - ಪಾಠ

ತೆವಳುತ್ತಿದ್ದವ ನಡೆಯುವುದಕ್ಕೆ ಕಲಿತಿದ್ದಾನೆ. ಎಲ್ಲವನ್ನು ಅಮ್ಮ ಕಲಿಸುವುದಕ್ಕಾರಂಬಿಸಿದ್ದಾರೆ. ಅಮ್ಮ ಹೇಳಿಕೊಟ್ಟಿದ್ದ ಪ್ರತಿಯೊಂದನ್ನು ಚಾಚು ತಪ್ಪದೇ ಪಾಲಿಸುತ್ತಾ ಬರುತ್ತಾ ಇದ್ದಾನೆ. ತುಂಬಾ ಹಸಿವಾದಾಗ ಒಂದು ಲೋಟದಲ್ಲಿ ಹಾಲು ಹಾಕಿ ಅದರೊಳಗೆ ರಸ್ಕ್ ಅನ್ನು ಅದ್ದಿ ಅಮ್ಮ ತಿನ್ನಿಸ್ತಾ ಇದ್ರು. ಇದನ್ನ ಪ್ರತಿದಿನ ನೋಡಿ ಅನುಸರಿಸಿದೆ. ಅವತ್ತು ನೆಂಟರು ಮನೆಗೆ ಹೋಗಿದ್ದಾಗ ಅವರು ಕುಡಿಯುವುದಕ್ಕೆ ಕೊಟ್ಟಿದ್ದರು ಬೆಳ್ಳಗಿದ್ದ ಕಾರಣ ಹಾಲು ಅಂತಂದುಕೊಂಡೆ ನಾನು ರಸ್ಕ್ ನ ಮುಳುಗಿಸಿ ತಿಂದ ಹಾಗೆ ಇಲ್ಲೂ ಮಾಡೋಣ ಅಂತ ಪ್ರಯತ್ನ ಪಟ್ಟೆ ಹಾಲಿನ ಬಿಸಿ ಹೆಚ್ಚಿದ ಕಾರಣ ಕೈ ಸುಟ್ಟುಹೋಯಿತು ಮೌನವಾಗಿ ಬಿಟ್ಟೆ ಇವತ್ತು ನನಗೆ ಅರ್ಥವಾದದ್ದು ಬಿಸಿಯಾಗಿರುವ ಯಾವುದೇ ವಸ್ತು ವ್ಯಕ್ತಿಯಾದರೂ ತಕ್ಷಣ ಅದರ ಸಂಪರ್ಕಕ್ಕೆ ಹೋಗಬಾರದು, ಅದರಿಂದ ನಾವೇ ಕೈ ಅಥವಾ ಮನಸ್ಸನ್ನು ಸುಟ್ಟು ಕೊಳ್ಳುತ್ತೇವೆ ಎಲ್ಲವನ್ನು ಅಮ್ಮನ್ನೇ ಹೇಳಿಕೊಡುವುದಕ್ಕಾಗುವುದಿಲ್ಲ ಆಗಾಗ ನಮ್ಮ ಅನುಭವಗಳು ಬದುಕಿನ ದೀರ್ಘ ಪಾಠಗಳಾಗ್ತವೆ.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ