ಸ್ಟೇಟಸ್ ಕತೆಗಳು (ಭಾಗ ೧೪೨೬) - ಜಲಪಾತ

ಕಾಲೇಜಿನ ಸಂಭ್ರಮದ ಕಾರ್ಯಕ್ರಮ ಒಂದಕ್ಕೆ ಜಲಪಾತವನ್ನು ತಯಾರು ಮಾಡ್ತಾ ಇದ್ವಿ. ಅದರ ತಯಾರಿ ಅಷ್ಟು ಸುಲಭದ್ದಾಗಿರಲಿಲ್ಲ. ಪ್ರತಿ ಹೆಜ್ಜೆ ಹೆಜ್ಜೆಗಳನ್ನು ದಾಟಿ ದೊಡ್ಡದಾದ ಜಲಪಾತ ತಯಾರಾಗಿ ನಿಂತಿತ್ತು ನೀರು ಇಳಿಯುವುದಕ್ಕೂ ಆರಂಭವಾಯಿತು, ಆ ಜುಳು ಜುಳು ಹರಿಯುವ ನಾದ ಚಿತ್ತಾರವಾದ ಜಲಪಾತ ನೋಡುಗರ ಕಣ್ಣವನ್ನು ಸೆಳೆಯುತ್ತಾ ಇದೆ. ಪ್ರತಿಯೊಬ್ಬರು ಅದರ ಮುಂದೆ ನಿಂತು ಚಿತ್ರಗಳನ್ನು ಕ್ಲಿಕ್ಕಿಸುವವರೇ , ಯಾರೂ ಕೂಡ ಆ ಜಲಪಾತದ ಇನ್ನೊಂದು ಬದಿಯಲ್ಲಿ ಏನಿದೆ ಎಂಬುದನ್ನು ನೋಡಲೇ ಇಲ್ಲ. ಅಲ್ಲಿ ಹಲವಾರು ಹಗ್ಗಗಳನ್ನ ನೆಯ್ದು ಗಂಟುಗಳನ್ನು ಹಾಕಿ ಕೋಲುಗಳನ್ನು ಇಟ್ಟು ಎತ್ತರದ ಹಲಗೆಗಳನ್ನು ಇಟ್ಟು ಆ ಜಲಪಾತವನ್ನು ತಯಾರಿಸಲಾಗಿದೆ .ಅದರ ಹಿಂದಿನ ಭಾಗವನ್ನು ನೋಡಿದರೆ ಯಾರಿಗೂ ಕೂಡ ಜಲಪಾತ ಇಷ್ಟವೇ ಆಗ್ಲಿಕ್ಕಿಲ್ಲ. ಹಿಂದೆ ಅಷ್ಟೆಲ್ಲಾ ಇರುವ ಕಾರಣ ಜಲಪಾತ ಸುಂದರವಾಗಿ ಕಾಣ್ತಾ ಇದೆ. ಹಾಗೆ ನಮ್ಮ ಬದುಕಿನಲ್ಲಿ ಮುಂದೆ ಎಷ್ಟೇ ಚಂದವಾಗಿ ಕಂಡರೂ ಎಷ್ಟೇ ಅದ್ಭುತ ಸಾಧನೆಗಳನ್ನು ಮಾಡಿದ್ರು ಸಾಗಿ ಬಂದ ದಾರಿಗಳಲ್ಲಿ ಏರು ತಗ್ಗುಗಳು ಇರುತ್ತವೆ. ಹಿನ್ನೆಲೆಯ ನೋವುಗಳನ್ನ ಮರೆತು ಸುಂದರವಾದ ಬದುಕಿನೊಳಗೆ ಹೆಜ್ಜೆ ಇಟ್ಟರೆ ಮಾತ್ರ ಬದುಕಿನ ಸಂಭ್ರಮದ ಜಲಪಾತ ಎಲ್ಲರಿಗೂ ಕಾಣಿಸುತ್ತದೆ.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ