ಸ್ಟೇಟಸ್ ಕತೆಗಳು (ಭಾಗ ೧೪೨೭) - ಭಗವಂತ

ಸ್ಟೇಟಸ್ ಕತೆಗಳು (ಭಾಗ ೧೪೨೭) - ಭಗವಂತ

ದೇವರಿಗೆ ಸರಿಯಾಗಿ ತಿಳಿದಿತ್ತು. ತಾನು ಎಲ್ಲಿಗೆ ಹೋಗಿ ಸೇರಬೇಕು ಅಂತ. ಕಾಲೇಜಿನಲ್ಲಿ ಗಣಪತಿಯನ್ನು ಕೂರಿಸುವ ಕಾರ್ಯಕ್ರಮ ಅದ್ದೂರಿಯಾಗಿ ನಡೆದಿತ್ತು. ಆತನನ್ನ ಕುಳ್ಳಿರಿಸಿ ಸಂಭ್ರಮದ ಕಾರ್ಯಕ್ರಮವನ್ನು ವಿದ್ಯಾರ್ಥಿಗಳು ನಡೆಸಿದರು ಕೂಡ. ದೇವರನ್ನ ವಿಸರ್ಜಿಸುವ ಕಾರ್ಯದಲ್ಲಿ ಸ್ಥಳಾವಕಾಶದ ತಾಣ ಇಲ್ಲಿ ಎನ್ನುವುದರ ಬಗ್ಗೆ ಕೊನೆಯವರೆಗೂ ತೀರ್ಮಾನ ಆಗಿರಲೇ ಇಲ್ಲ. ಎಲ್ಲರೂ ಭಗವಂತನ ಮೇಲೆ ಭಾರ ಹಾಕಿ ಸುಮ್ಮನಾಗಿ ಬಿಟ್ಟರು. ಇದ್ದ ಕಡೆ ಅನಗತ್ಯ ಕಾರಣಗಳನ್ನು ನೀಡಿ ಭಗವಂತ ಬರುವುದನ್ನ ತಡೆ ಹಿಡಿದಿದ್ದರು ಕೂಡ. ಆದರೆ ದೇವರಿಗೆ ತಾನು ತಲುಪುವ ಸ್ಥಳದ ಬಗ್ಗೆ ನಿರ್ದಿಷ್ಟ ಯೋಚನೆ ಇದ್ದ ಕಾರಣ ಹೊಸತೊಂದು ಕೆರೆಯಿಂದ ಕರೆ ಬಂತು. ಆ ಕೆರೆಯಲ್ಲಿ ಮುಳುಗುವ ಮೊದಲ ಅವಕಾಶ ಆ ಗಣಪನ ಪಾಲಿಗೆ ಸಿಕ್ಕಿತು.ಎಂದಿಗಿಂತಲೂ ಅದ್ಭುತವಾದ ಕಾರ್ಯಕ್ರಮ ಆಯೋಜನೆಗೊಂಡು ಎಲ್ಲರಿಗೂ ಮನಸ್ಸು ಸಂತೃಪ್ತಿಯಾಯಿತು ಭಗವಂತನಿಗೆ ಪ್ರಿಯವಾದಂತೆ ಅನಿಸಿತು. ಗಮನಿಸಿದಾಗ ಅರ್ಥವಾದದ್ದು  ಭಗವಂತ ಆಡಿಸುತ್ತಾನೆ ನಾವು ಆಡಬೇಕು ನಾವು ನಿಯಮಕರು ಮಾತ್ರ.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ