ಸ್ಟೇಟಸ್ ಕತೆಗಳು (ಭಾಗ ೧೪೨೮) - ಗಣಪತಿ

ನನ್ನನ್ನು ಆಚರಿಸುತ್ತೀರಾ, ಸಂಭ್ರಮಿಸುತ್ತೀರಾ, ಖುಷಿ ಪಡ್ತೀರಾ, ಕುಣಿತೀರ ಮಾತಾಡ್ತೀರಾ ಹೀಗೆ ಬೇರೆ ಬೇರೆ ರೂಪದಲ್ಲಿ ನನ್ನನ್ನ ಆರಾಧಿಸುವ ಪ್ರಯತ್ನ ಪಡ್ತಿರಾ. ಎಲ್ಲ ಮುಗಿದ ಮೇಲೆ ಸಂಭ್ರಮದಿಂದ ಹೊತ್ತು ನೀರಿನಲ್ಲಿ ಮುಳುಗಿಸುತ್ತೀರಾ, ಇದೆಲ್ಕವೇ ನನಗೆ ಪ್ರಿಯವಾದದ್ದೇ, ಆದರೆ ನನ್ನ ಉದ್ದೇಶ ಒಂದೇ ನೀವೆಲ್ಲರೂ ಒಟ್ಟಾಗಿರಬೇಕು ಒಟ್ಟಾಗಿ ಕೆಲಸ ನಿರ್ವಹಿಸಬೇಕು ಒಳ್ಳೆಯ ಆಲೋಚನೆಯಿಂದ ಬದುಕಬೇಕು ಸತ್ಚಿಂತನೆಗಳು ನಿಮ್ಮ ಬದುಕಿಗೆ ದಾರಿ ದೀಪವಾಗಬೇಕು, ಒಳ್ಳೆಯವರ ಸಹವಾಸ ಮಾಡಬೇಕು, ನಿಮ್ಮ ಧರ್ಮ, ಈ ನೆಲವನ್ನ ಗೌರವಿಸುವ ವ್ಯಕ್ತಿಗಳು ನೀವಾಗಬೇಕು ಆಲೋಚನೆಗೋಸ್ಕರ ನಾನು ನನ್ನೂರು ಬಿಟ್ಟು ನಿಮ್ಮೂರನ್ನು ಆರಿಸಿ ಬರುತ್ತೇನೆ. ಆದರೆ ಕೆಲವೊಂದು ಸಲ ನೀವು ನನ್ನ ಆಚರಣೆಯಲ್ಲಿ ಮಾಡುವ ಅತಿರೇಕ ವರ್ತನೆ ನೋವು ಕೊಡುತ್ತೆ ನನ್ನ ಆಚರಣೆಗೆ ಅರ್ಥವಿಲ್ಲದೆ ಕುಣಿಯುವುದು ಬರಿಯ ಕುಣಿಯುವಿಕೆಗೆ ನನ್ನನ್ನ ಆಚರಿಸುವುದು. ಹಾಗಂತ ನಾನೇನು ನಿಮಗೆ ಶಾಪ ಕೊಡುವವನಲ್ಲ. ನಾನು ಬುದ್ಧಿಗೆ ಅಧಿದೇವ ನಾನೇ ಒಳ್ಳೆಯ ಬುದ್ದಿಗಳನ್ನು ನಿಮಗೆ ಕೊಡಬೇಕು. ಖಂಡಿತ ಕೊಡುತ್ತೇನೆ .ಈ ಮಾತುಗಳನ್ನಾಡಿ ಮತ್ತೆ ಹೋಗಿ ಮೂರ್ತಿ ಒಳಗೆ ಸೇರಿಕೊಂಡ ಗಣಪ.
ಚಿತ್ರ ಕೃಪೆ: ಇಂಟರ್ನೆಟ್ ತಾಣ