ಸ್ಟೇಟಸ್ ಕತೆಗಳು (ಭಾಗ ೧೪೩೦) - ದೀಪ

ಸ್ಟೇಟಸ್ ಕತೆಗಳು (ಭಾಗ ೧೪೩೦) - ದೀಪ

ದೀಪಕ್ಕೆ ಬೇಸರವಾಗಿತ್ತು. ವೇದಿಕೆ ಮುಂದೆ ಕಾರ್ಯಕ್ರಮಗಳಲ್ಲಿ ದೇವರ ಮುಂದೆ ಎಲ್ಲ ಕಡೆ ಹಚ್ಚುವಾಗ ಕೈ ಅಡ್ಡ ಹಿಡಿದು ಜಗತ್ತು ಮತ್ತು ಮುಂದಿರುವವರು ನನ್ನನ್ನು ನೋಡದ ಹಾಗೆ ತಡೆ ಮಾಡುವುದು ಯಾರಿಗೂ ತೋರಿಸಬಾರದೆನ್ನುವ ಅಹಂಕಾರ ಏಕೆ? ಈ ಮೋಸವನ್ನು ನಾನು ಒಪ್ಪಿಕೊಳ್ಳುವುದಿಲ್ಲ. ನನಗೆ ಇದರಿಂದ ಮುಕ್ತಿ ಬೇಕು, ನನ್ನ ಪ್ರಖರವಾದ ಬೆಳಕು ಜಗತ್ತಿಗೆ ಕಾಣಬೇಕು. ನನ್ನ ಉರಿಯುವ ಮೊದಲ ಕ್ಷಣದ ನೋಟವು ಪ್ರತಿಯೊಬ್ಬರಿಗೆ ತಲುಪಬೇಕು. ಹಾಗಾಗಿ ಕೈ ಅಡ್ಡ ಹಿಡಿಬೇಡಿ. ನನಗೆ ತೊಂದರೆ ಆಗುತ್ತದೆ ಹೀಗೆಂದು ದೀಪದ ಬೇಡಿಕೆಯ ಪಟ್ಟಿ. ಉತ್ತರ ಎಷ್ಟೇ ಸಾರಿ ವಿವರಿಸಿದರೂ ಕೂಡ ಆ ದೀಪಕ್ಕೆ ಅರ್ಥ ಆಗಲಿಲ್ಲ. ಕೈ ಅಡ್ಡ ಹಿಡಿಯದೆ ಹೋದರೆ ಆ ದೀಪ ಉರಿಯುವುದಕ್ಕೂ ಸಾಧ್ಯ ಇಲ್ಲ ಹೊರಗಡೆ ಬೀಸುವ ಗಾಳಿ ಆ ದೀಪವನ್ನು ಮತ್ತೆ ಮತ್ತೆ ಹಾರಿಸುವುದಕ್ಕೆ ಪ್ರಯತ್ನಿಸುತ್ತಾನೆ ಇರುತ್ತದೆ .ಮುಂದೆ ಹೆಚ್ಚು ಪ್ರಕರತೆಯಿಂದ ಉರಿದು ಬೆಳಕ ನೀಡುವ ದೀಪ ಮೊದಲಿಗೆ ಕೈ ಅಡ್ಡ ಹಿಡಿಯಲೇಬೇಕು ತನ್ನ ಬೆಳಕು ಹೆಚ್ಚು ಶ್ರಮ ಬಾಳ್ವಿಕೆ ಬರುವುದು ಬರುವಿಕೆಗೆ ಅಡ್ಡ ಹಿಡಿದ ಕೈಯನ್ನ ಸರಿಯಾಗಿ ಅರ್ಥಮಾಡಿಕೊಳ್ಳಲಾರದೆ ದೀಪ ಸೋತು ಹೋಗಿತ್ತು. ಮುಂದಿನ ಕೆಲವು ಸಮಯದಿಂದ ಕೈ ಅಡ್ಡ ಹಿಡಿಯದೆ ಹೋದ ಕಾರಣ ದೀಪ ಉರಿಯಲ್ಲೇ ಇಲ್ಲ

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ