ಸ್ಟೇಟಸ್ ಕತೆಗಳು (ಭಾಗ ೧೪೩೧) - ಹುಚ್ಚ

ಅವನು ಮೂಲೆಗೆ ಒರಗಿ ರಸ್ತೆ ಬದಿ ಕುಳಿತಿದ್ದಾನೆ. ಆತನಿಗೆ ಕಾಲರಾಯ ಅಂತ ಹೆಸರಿಟ್ಟಿದ್ದಾರೆ. ಆತ ಏನೇನೋ ಮಾತಾಡ್ತಾನೆ ಮೊನ್ನೆ ಕೆಲವು ದಿನಗಳಿಂದ ಸುಮ್ಮನೆ ಅಳುತ್ತಿದ್ದಾನೆ. ದಾರಿಯಲ್ಲಿ ಹಾದು ಹೋಗುವವರಿಗೆಲ್ಲ ನೀವು ಈ ಭೂಮಿಯಲ್ಲಿ ಬದುಕಿರುವುದೇ ವ್ಯರ್ಥ. ಅದಕ್ಕೆ ನಿಮ್ಮ ಬದುಕಿಗೆ ಅರ್ಥವಿಲ್ಲ ನಿಮ್ಮ ಜೀವಕ್ಕೆ ಬೆಲೆಯು ಇಲ್ಲ ನೀವು ನಿಮ್ಮ ಕುಟುಂಬಕ್ಕೆ ಮಾತ್ರ ಸೀಮಿತ. ನೀವು ಬೆಳೆದರೂ, ಕೊನೆಗೆ ಸತ್ತರೂ ಕೂಡ ನಿಮ್ಮನ್ನು ಕೇಳುವವರಿಲ್ಲ. ಅಂತಹ ಬದುಕು ನಿಮ್ಮದು. ಇತ್ತೀಚೆಗೆ ಬಸ್ಸೊಂದು ನಿಯಂತ್ರಣ ತಪ್ಪಿ ಎರಡು ಜನ ಸತ್ತು ಹೋದರು, ಇದೇ ರಸ್ತೆಯಲ್ಲಿ ಅಪಘಾತದಲ್ಲಿ ನೂರಕ್ಕೂ ಹೆಚ್ಚು ಜನ ಸತ್ತಿದ್ದಾರೆ, ನೋವಿನಿಂದ ಆತ್ಮಹತ್ಯೆ ಮಾಡಿಕೊಂಡವರಿದ್ದಾರೆ. ಯಾರಿಂದಲೂ ಕೊಲೆಯಾದವರು ಇದ್ದಾರೆ. ಯಾವ ಯಾವುದೋ ಕಾರಣಕ್ಕೆ ಸತ್ತ ಹೋಗ್ತಾರೆ, ಹೀಗೆ ಸತ್ತವರ ನೆನಪು ಯಾರಿಗೂ ಇರುವುದಿಲ್ಲ. ನೀನು ಅದ್ಭುತ ಸಾಧಕನಾದರೆ ಶ್ರೀಮಂತರಾದರೆ ನಿನ್ನ ಸಾವನ್ನ ಆಗಾಗ ನೆನಪಿಸಿಕೊಳ್ಳುತ್ತಾರೆ. ಇಲ್ಲವಾದರೆ ಸಾವಿಗೂ ಬೆಲೆ ಇಲ್ಲ. ಜೋರಾಗಿ ನಕ್ಕು ಮತ್ತೆ ಅತ್ತು ಹೀಗೆ ಕುಣಿಯುತ್ತ ವಿಚಿತ್ರವಾಗಿ ಆಡುತ್ತಾನೆ. ಅವನ ಈ ಮಾತನ್ನು ಒಪ್ಪಿಕೊಳ್ಳಬೇಕೋ ಇಲ್ಲ ಹಾಗೇನಿಲ್ಲ ಅಂತಂದು ಕೊಳ್ಳಬೇಕೋ ಗೊತ್ತಾಗ್ಲಿಲ್ಲ. ಅದಕ್ಕೆ ಅಭಿಪ್ರಾಯಕ್ಕಾಗಿ ನಿಮ್ಮ ಮುಂದೆ…
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ