ಸ್ಟೇಟಸ್ ಕತೆಗಳು (ಭಾಗ ೧೪೩೨) - ಮಕ್ಕಳು

ಮಕ್ಕಳು ಬೇಗ ದೊಡ್ಡವರಾಗುತ್ತಿದ್ದಾರೆ. ಇದು ಸದಾಶಿವರಾಯರು ಪ್ರತಿ ಸಲವೂ ಎಲ್ಲರ ಮುಂದೆ ಹೇಳುತ್ತಿದ್ದ ಮಾತು. ಕಾರಣ ತುಂಬಾ ದೊಡ್ಡದೇನಲ್ಲ ಅವರು ಪಾಠ ಕಲಿಸುತ್ತಿದ್ದ ಶಾಲೆಯಲ್ಲಿ ಮಕ್ಕಳು ಪ್ರೀತಿ ಒಳಗೆ ಬಂದಿಯಾಗಿದ್ದಾರೆ, ಒಂದಷ್ಟು ಸುಳ್ಳಿನ ಪ್ರಪಂಚದಲ್ಲಿ ಮನೆಯವರ ಕಣ್ಣು ತಪ್ಪಿಸಿ ಕೈ ಕೈ ಹಿಡಿದು ಓಡಾಡುತ್ತಿದ್ದಾರೆ, ಸರಿ ತಪ್ಪುಗಳನ್ನ ತಿಳಿಸಿ ಹೇಳುವ ಹಾಗಿಲ್ಲ ಎಲ್ಲರಿಗೂ ಎದುರು ಮಾತನಾಡುವವರೇ, ಅವರ ಪ್ರಕಾರ ಅವರು ಸರಿ ಅವರದ್ದೇನೋ ತಪ್ಪಿಲ್ಲ. ದೇಹದ ಅಂಗಗಳನ್ನು ತೋರಿಸಿ ಇನ್ನೊಂದಷ್ಟು ಹೆಚ್ಚು ಜನರನ್ನು ತಮ್ಮ ಅಭಿಮಾನಿಗಳಾಗುವ ಹಾಗೆ ಮಾಡುವ ಆಸೆ ಹೀಗೆ, ಕಣ್ಣ ಮುಂದೆ ತಾನು ಕಾಣದ ಬದುಕನ್ನ ಕಾಣುತ್ತಿರುವಾಗ ಸದಾಶಿವರಾಯರಿಗೆ ಮತ್ತೆ ಮತ್ತೆ ಅನಿಸ್ತಾ ಇದೆ ಮಕ್ಕಳು ಮಕ್ಕಳಾಗಿ ಉಳಿದಿಲ್ಲ ದೊಡ್ಡವರಾಗಿದ್ದಾರೆ ಎಂದು, ಇದನ್ನ ಸರಿ ಮಾಡುವ ದಾರಿಕಾಣದೆ ತಲೆಯ ಕೂದಲು ಬೆಳ್ಳಾಗಾಗಿದೆ. ಉತ್ತರ ದೊರೆತಿಲ್ಲ…
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ