ಸ್ಟೇಟಸ್ ಕತೆಗಳು (ಭಾಗ ೧೫೦) - ಮುಂದಿನ ಸೀಟು

ಸ್ಟೇಟಸ್ ಕತೆಗಳು (ಭಾಗ ೧೫೦) - ಮುಂದಿನ ಸೀಟು

ಗಾಲಿಗಳು ತಿರುಗಿದಂತೆ ಕಿಟಕಿಗಳು ಗಾಳಿಯನ್ನು ಒಳಕ್ಕೆ ಕಳಿಸುತ್ತಿತ್ತು. ಮುಖಕ್ಕೆ ರಾಚುವ ಗಾಳಿ ಮುದ ನೀಡಿದರೂ ಹೊಟ್ಟೆಯೊಳಗಿನ ಉರಿ ನಿಲ್ಲುತ್ತಿಲ್ಲವಲ್ಲ. ನನ್ನ ಮುಂದಿನ ಸೀಟಿನ ಸಂಭಾಷಣೆಯನ್ನು ನಿಮಗೆ ತಲುಪಿಸುತ್ತೇನೆ. ಬೇರೆಯವರು ಮಾತಾಡೋದನ್ನ ಕೇಳೋದು ತಪ್ಪು, ನಾನೀಗ ನಿಮಗೋಸ್ಕರ ಕೇಳುತ್ತಿರುವುದು, ಆಯ್ತಾ ?."ಹಾಯ್" ಆ ಕಡೆಯಿಂದ ಒಂದು ನಗು "ನಿಮ್ಮ ಹೆಸರು" "ಶಶಿ" "ಕಾಲೇಜು ಓದುತ್ತಿದ್ದೀರಾ ?" "ಹು""ನಿಮ್ಮ ಹೇರ್ ಸ್ಟೈಲ್ ತುಂಬಾ ಚೆನ್ನಾಗಿದೆ ""ಥ್ಯಾಂಕ್ಯು " ನೀವು ಸಿಂಗಲ್ಲಾ? "ಹ" ಯಾಕೆ ಯಾರೂ ಬಂದು ಪ್ರಪೋಸ್  ಮಾಡಿಲ್ವಾ?"" ನಾನು ಆ ಯೋಚನೆ ಮಾಡಿಲ್ಲ" "ಯಾಕೆ "'ನನ್ನ ಆಲೋಚನಾ ದಾರಿಯೇ ಬೇರೆ' 

"ನಾವು ಒಂದ್ಸಲ ಮಾತನಾಡಿಕೊಳ್ಳಬಹುದಲ್ವಾ?"" ನನಗೊಂದಿಷ್ಟು ಜವಾಬ್ದಾರಿ ಇದೆ, ಅದೆಲ್ಲ ಮುಗಿದ ಮೇಲೆ ಬೇಕಿದ್ರೆ ನೋಡುವ" ಮತ್ತೆ ಮೌನ ........?

"ಅಲ್ಲಾ ನನ್ನ ಹೇರ್ ಸ್ಟೈಲ್ ಚೆನ್ನಾಗಿರಲಿಲ್ವಾ? ನಾನು ಸಿಂಗಲ್, ನಂಗೂ ಜವಾಬ್ದಾರಿ ಇದೆ. ಆದರೆ ಮಾತನಾಡೋದಕ್ಕೆ ಏನೂ ತೊಂದರೆ ಇಲ್ಲವಲ್ಲ" 

 "Every dog has one day "ಅಂತ ಒಂದು ಮಾತಿದೆ ." ಮಗ ಸ್ವಲ್ಪ ಆ ಕಡೆ ಹೋಗಪ್ಪ" "ಬನ್ನಿ ಅಜ್ಜಿ ಆರಾಮಾಗಿ ಕೂತ್ಕೊಳ್ಳಿ "ಅಜ್ಜಿಗೆ ಸೀಟು ಕೊಟ್ಟ ಪುಣ್ಯಕ್ಕಾದರೂ, ನನ್ನ ಪಕ್ಕದ ಸೀಟಿಗೆ ಯಾರಾದರೂ ಬರಲಿ ? ಮದುವೆಯಾದ ಮೇಲೆ ಅದು ನನ್ನವಳಿಗೆ ಮಾತ್ರ ಅಲ್ವಾ?, ಅದಕ್ಕೂ ಮೊದಲೇ…

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ; ಇಂಟರ್ನೆಟ್ ತಾಣ