ಸ್ಟೇಟಸ್ ಕತೆಗಳು (ಭಾಗ ೧೫೩) - ಕಣ್ಣೀರು

ಸ್ಟೇಟಸ್ ಕತೆಗಳು (ಭಾಗ ೧೫೩) - ಕಣ್ಣೀರು

ಕಣ್ಣೀರಿನ ಹನಿಗಳು ಜೋಡಣೆಯಾಗಿ ಕೆನ್ನೆಯ ಮೇಲೆ ಮಾಲೆಗಳಾಗಿ ಇಳಿಯುತ್ತಿದೆ. ಇದು ಯಾವಾಗಲೂ ಒಮ್ಮೆ ಬರುವುದಾದರೆ ಪರವಾಗಿಲ್ಲ, ದಿನವೂ ಅದೇ ದಿನಚರಿ ಆಗಿದೆ .

ಅವಳ ಬದುಕಿನ ಹಳಿತಪ್ಪಿದೆಯೋ ಅಥವಾ ಗುರಿ ದೂರವಿದ್ದು ತಲುಪುವ ಸಮಯ ನಿಧಾನವಾಗಿದೆಯೋ ಗೊತ್ತಿಲ್ಲ. ಒಟ್ಟಿನಲ್ಲಿ ತ್ರಿಶಂಕು ಸ್ಥಿತಿಯಲ್ಲಿದ್ದಾಳೆ. ಅವಳ ಕಣ್ಣೀರನ್ನು ಮನೆಯ ಕನ್ನಡಿ, ಮರ-ಗಿಡಗಳು, ಬಚ್ಚಲುಮನೆ ಕಂಡಿದ್ದೇ ವಿನಃ ಮನುಷ್ಯನಲ್ಲ. ಕಣ್ಣೀರಿನ ಕಾರಣಗಳ ಪಟ್ಟಿ ದೊಡ್ಡದಿದೆ ಇಲ್ಲಿ ಎಲ್ಲವೂ ಕಣ್ಣೀರಿನ ಕಾರಣಗಳಾಗಿ ಇಲ್ಲ. ಆದರೆ ಕಣ್ಣೀರಿನ ಹುಡುಕುವಿಕೆಗೆ ಪ್ರೋತ್ಸಾಹವನ್ನು ನೀಡುತ್ತಿದೆ. ಅವಳ ಬಳಿ ಮುಖವಾಡಗಳು ಇರುವುದರಿಂದಲೇ ಈಗಲೂ ಬದುಕಿದ್ದಾಳೆ. ಅವಕಾಶಗಳ ದೀಪ ಉರಿಸಿ ಅರ್ಧದಲ್ಲೇ ತಿರಸ್ಕರಿಸಿದ ಕೈಗಳ ನೆನಪು ಎದೆಯಾಳದಲ್ಲಿ ಆಗಾಗ ಚುಚ್ಚಿ ಎಚ್ಚರಿಸುತ್ತಾರೆ. ಬೇಡುವಿಕೆಗೆ ಪ್ರತಿಫಲ ದೊರಕದೆ ಇದ್ದಾಗ ಮೌನವಾಗಿ  ಸಹಿಸಿಕೊಂಡಿದ್ದಾಳೆ. ತಿರಸ್ಕರಿಸಿದವರ ಮುಂದೆ ಮೇಲೆದ್ದು ನಿಲ್ಲುವ ಕಾಯಕವೊಂದರ ಯೋಚನೆಯಿಂದ ಮತ್ತೆ ಕಾರ್ಯರಂಗಕ್ಕೆ ಇಳಿದಿದ್ದಾಳೆ.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ