ಸ್ಟೇಟಸ್ ಕತೆಗಳು (ಭಾಗ ೧೮೯) - ಪ್ರತಿಭಾ ಸಂಪನ್ನರು
ಪತ್ರಿಕೆಯಲ್ಲಿ ಸುದ್ದಿ ಪ್ರಕಟವಾಗಿತ್ತು "ಕಲಾ ಪ್ರತಿಭೆಗಳನ್ನು ಗುರುತಿಸಿ, ಪ್ರೋತ್ಸಾಹಿಸುವ ಕಾರಣಕ್ಕಾಗಿ ರೂಪುಗೊಂಡ ಸಂಸ್ಥೆ ರಾಜ್ಯ ಮಟ್ಟದ ಪ್ರಶಸ್ತಿ ನೀಡಲು ಸಿದ್ದವಾಗಿದೆ. ಹಲವು ವರ್ಷ ಪ್ರತಿಭಾ ರತ್ನಗಳನ್ನ ರಾಜ್ಯಕ್ಕೆ ಪರಿಚಯಿಸಿದೆ. ನಿಮ್ಮ ಮನೆಯ ಪ್ರತಿಭೆಯ ಸಣ್ಣ ವೀಡಿಯೋ ಕಳುಹಿಸಿ ಪ್ರೋತ್ಸಾಹಕರಾಗಿ". ಸಂಖ್ಯೆಯನ್ನೂ ನೀಡಿದ್ದರು. ಹಲವು ವೀಡಿಯೋಗಳು ಸರಬರಾಜಾದವು. ಕೆಲವೇ ದಿನಗಳಲ್ಲಿ ಆಯ್ಕೆಯಾದ ಶುಭಸುದ್ದಿಯ ಸಂದೇಶವೂ ತಲುಪಿತು. ಮಾಹಿತಿಗಾಗಿ ಕರೆ ಮಾಡಿದರೆ " ಶುಭಾಶಯ ಸರ್. ನಿಮ್ಮ ಮನೆಯ ಮಗುವಿನ ಪ್ರತಿಭೆ ರಾಜ್ಯಕ್ಕೆ ತಿಳಿಯುವ ದಿನ ದೂರ ಇಲ್ಲ. ಈಗ ನೀವೇನು ಮಾಡ್ಬೇಕಂದ್ರೆ, ಶಾಲು, ಫಲಕ, ಸ್ಮರಣಿಕೆ, ಹಾರ, ಹಣ್ಣು ಹಂಪಲು ಜೊತೆಗೆ ನಿಮ್ಮನ್ನು ಆಯ್ಕೆ ಮಾಡಿದವರಿಗೆ ಭಕ್ಷೀಸು. ಇದನ್ನ ನೀಡಬೇಕು, ಒಟ್ಟು ಖರ್ಚಿನ ವಿವರ ಎರಡು ಸಾವಿರದ ಐದು ನೂರು . ಇದನ್ನೆಲ್ಲಾ ಗಮನಿಸಿ ರಾಗ ಪ್ರತಿಭೆ ಮಾರಾಟವಾಗಿದೆ. ಯಾರದೋ ಹೊಟ್ಟೆ ತುಂಬಲು. ಒಂದೇ ಸಲ ಮಿಂಚು ಬಂದಂಗೆ ಬರಬಾರದು ಕೋಣೆಯ ತುಂಬಾ ನಿಧಾನವಾಗಿ ಹಣತೆಯಂತೆ ತನ್ನ ಬೆಳಕನ್ನು ಚೆಲ್ಲಿ ಚಿರಸ್ಥಾಯಿಯಾಗಬೇಕು...
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ