ಸ್ಟೇಟಸ್ ಕತೆಗಳು (ಭಾಗ ೧೯೨) - ಹೆರಿಗೆ
ಸರಕಾರಿ ಆಸ್ಪತ್ರೆ. ಸೂರ್ಯ ಏಳುವುದಕ್ಕೆ ಇನ್ನೂ ಸಮಯವಿತ್ತು. ಅವನ ಅಲರಾಂ ಬಡಿಯುತ್ತಿಲ್ಲ ಅಂತ ಕಾಣುತ್ತೆ. ಕತ್ತಲೆಯೇ ಹೆಚ್ಚು ತುಂಬಿರುವ ಅಲ್ಲಿ ಬೆಳಕಿನ ಕೋಣೆಯೊಳಗೆ ಅವಳು ಮಲಗಿದ್ದಾಳೆ. ಇಂದು ಮಗು ಜನಿಸಬಹುದು ಎಂದು ಡಾಕ್ಟರು ಹೇಳಿದ್ದಾರೆ. ರಾತ್ರಿಯೇ ಹೆರಿಗೆ ನೋವು ಬಂದದ್ದಕ್ಕೆ ಆಸ್ಪತ್ರೆ ಸೇರಿಸಿದರು. ನೋವು ಆರಂಭವಾಯಿತು. ಮಗುವಿನ ಜನನವೂ . ಕತ್ತಲೆಯಿಂದ ಬೆಳಕಿಗೆ ಬಂದ ಮಗು ಸಣ್ಣದಾಗಿ ಅಳುವಿನ ರಾಗ ಹಾಡಿತು. ಸೂರ್ಯ ಹುಟ್ಟಿದ ದಿಗಂತದಲ್ಲಿ. ಮಗುವಿನ ಜೋಗುಳದ ಹಾಡಿಗೆ ಹೊರಗಿನ ವರಾಂಡದಲ್ಲಿ ಕೂತ ರಾಮಯ್ಯನಿಗೆ ಮಾತೆ ಬರುತ್ತಿಲ್ಲ. ಮೌನವಾಗಿದ್ದಾನೆ. ಸಂಭ್ರಮದ ಕಣ್ಣೀರು ಇಳಿಯುತ್ತಿದೆ. ಅವನು ನೋವನುಭವಿಸಿದ್ದಾನೆ. ಅವಳು ಹೆತ್ತದ್ದು ಮಗುವನ್ನು ಕಾಣಿಸುತ್ತಿದೆ ಆದರೆ ರಾಮಣ್ಣ ಅವನ ಬದುಕಿನ ಜವಾಬ್ದಾರಿಯನ್ನು ಹೆತ್ತಿದ್ದಾನೆ. ಕೆಲವೊಮ್ಮೆ ಪರಿಸ್ಥಿತಿ ಬಿಗಡಾಯಿಸಿದಾಗ ಗಂಡು-ಹೆಣ್ಣು ಇಬ್ಬರೂ ಜನನವೇ ಇಲ್ಲದ ಹೆರಿಗೆ ನೋವನ್ನು ಅನುಭವಿಸುತ್ತಾರೆ. ಅಲ್ಲಿ ಯಾವ ಜೀವವೂ ಜನನ ವಾಗುವುದಿಲ್ಲ. ಪರಿಸ್ಥಿತಿ ನೋವು ಸಾಲಗಳು ಪ್ರತ್ಯಕ್ಷವಾಗಿ ಒಡನಾಡಿಗಳಾಗುತ್ತವೆ ರಾಮಣ್ಣನಿಗೆ. ಹೆರಿಗೆ ಅನ್ನೋದು ನೋವಿನಲ್ಲೂ ಸಂಭ್ರಮವಿದೆ ಅನ್ನೋದನ್ನ ಕಾಣುವ ಜಾಗ ಆದರೆ ಎಲ್ಲರಿಗೂ ಅಲ್ಲವಲ್ಲ...
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ