ಸ್ಟೇಟಸ್ ಕತೆಗಳು (ಭಾಗ ೧೯೮) - ಕ್ಯಾಲೆಂಡರ್
ಕಾಲದೊಂದಿಗೆ ನಾವು ಕಳೆದು ಹೋಗೋ ದಿನ ದೂರವಿಲ್ಲ ಅನ್ನಿಸ್ತಿದೆ. ನನ್ನನ್ನೇ ವಿಪರೀತ ನಂಬಿದ ಕಾಲವೊಂದಿತ್ತು. ನಾನು ಕಾಲ, ಘಳಿಗೆ ನಕ್ಷತ್ರಗಳನ್ನ ನನ್ನೊಳಗೆ ಅಪ್ಪಿಕೊಂಡು ನಿನ್ನ ದಿನವನ್ನು ಸೂಚಿಸುತ್ತಿದೆ. ನನ್ನ ದೇಹದ ಮೇಲೆಲ್ಲಾ ನಿನ್ನ ಗುರುತಿಸುವಿಕೆಯ ಚಿಹ್ನೆಗಳು ಹೆಚ್ಚಾದವು. ಮದುವೆ-ಮುಂಜಿ ಶಾಲೆ, ಸಾಲ, ಉದ್ಯೋಗ, ಮೊಬೈಲ್ ಸಂಖ್ಯೆ, ಹೀಗೆ ಎಲ್ಲಾ ಬರವಣಿಗೆಯ ಸಾಹಿತ್ಯಕ್ಕೆ ನಾನು ವೇದಿಕೆಯಾದೆ. ನನಗೆ ದಿನವೂ ನೀವು ನನ್ನ ನೋಡಿ ದಿನವನ್ನು ಆರಂಭಿಸುವಾಗ ಹೆಮ್ಮೆಯಾಗುತ್ತಿತ್ತು. ಮೊಳೆಗೆ ನಾನು ನೇತು ಬಿದ್ದಿದೆ, ನೀನು ನಡೆಯಲು ನಾ ಸಹಕಾರಿಯಾಗಿದ್ದೆ. ಕಾಲದೊಂದಿಗೆ ಹೊಂದಿಕೆಯಾಗಬೇಕು. ನೀನು ನನ್ನ ನೋಡುವುದನ್ನು ಬಿಟ್ಟು ನಿನ್ನ ಮೊಬೈಲ್ ನಲ್ಲಿ ದಿನಗಳನ್ನು ಗಮನಿಸಲಾರಂಭಿಸಿದೆ.
ಅನಾಥನಾದ ನಾನು ಜೇಡರ ಬಲೆಯೊಂದಿಗೆ ಸಂವಾದಿಯಾದೆ. ದಿನ ತೋರಿಸುವ ಕೆಲಸವನ್ನೇ ದಿನವೂ ಮಾಡುವುದರಿಂದ ಆ ದಿನವನ್ನ ದೂಡಲು ಕಷ್ಟವಾಗುತ್ತಿದೆ. ನಿನ್ನಿಂದ ಕಡೆಗಣಿಸಿಗೊಂಡು ವ್ಯರ್ಥವಾಗಿ ಮೌನಿಯಾದ್ದಕ್ಕೆ ನೋವಿದೆ. ಉಪಯೋಗ ಇದ್ದರೆ ಮಾತ್ರ ಬಳಸು ಹಾಗೂ ಇಲ್ಲದಿದ್ದರೆ ಬಳಸುವುದನ್ನು ಬಿಟ್ಟುಬಿಡು. ಬಿಡುವಿರಾ ಮತ್ತೆ ಅಪ್ಪಿ ಹಿಡಿಯುವಿರಾ ನಿಮಗೆ ಬಿಟ್ಟದ್ದು…
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ