ಸ್ಟೇಟಸ್ ಕತೆಗಳು (ಭಾಗ ೨೦೧) - ಕಳೆದುಕೊಳ್ಳುವುದು
ಜ್ಞಾನೋದಯವಾಗುವುದಕ್ಕೆ ಸಮಯ ಸಂದರ್ಭ ಇರೋದಿಲ್ಲ. ಇವತ್ತು ಗಣೇಶನ ಪಕ್ಕ ಕೂತಿದ್ದೆ. ಕೊನೆಯ ಒಂದು ದಿನ ಇರೋದು ಅವನನ್ನು ವಿಸರ್ಜಿಸೋದಕ್ಕೆ, ಅದಕ್ಕೆ ಆತ್ಮೀಯತೆಯಿಂದ ಕುಶಲೋಪರಿ ನಡೆಸುವಾಗ ತಟ್ಟನೆ ಆಲೋಚನೆಯೊಂದು ತಲೆಯೊಳಗೆ ಮಿನುಗಿತ್ತು. ನಾನು ತುಂಬಾ ಸಲ ಯೋಚಿಸ್ತಾ ಇರ್ತೇನೆ, ನಾನು ಕಳೆದುಕೊಂಡೆ ಅಂತ!. ನನಗದು ಸಿಗಬೇಕಿತ್ತು ಅಂತ ಕೂಡ ಅಂದುಕೊಳ್ಳುತ್ತೇನೆ. ಹುಟ್ಟುವಾಗ ಏನೂ ತರಲಿಲ್ಲ. ಎಲ್ಲವನ್ನು ಪಡೆದುಕೊಳ್ಳುತ್ತಾ ಸಾಗಿದೆ. ಇದೆಲ್ಲವೂ ನನ್ನ ಲಾಭದ ಜೋಳಿಗೆಗೆ ಸೇರುತ್ತಿರುವಾಗ ನನ್ನ ಲಾಭದಿಂದ ಒಂದಷ್ಟು ವಿಚಾರಗಳು ಸಿಗದೇ ಹೋದಾಗ, ಕೈ ತಪ್ಪಿದಾಗ, ನಾನು ಕಳೆದುಕೊಂಡಂತಾಗುತ್ತದೆಯೇ? ನನಗೆ ಯಾಕೋ ಈ ಲೆಕ್ಕದ ವಿಚಾರ ಅರ್ಥ ಆಗ್ತಾ ಇಲ್ಲ. ನನಗಾಗಿರೋದು ಅಥವಾ ನಮಗಾಗುವುದು ಲಾಭವೋ ನಷ್ಟವೋ?...
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ