ಸ್ಟೇಟಸ್ ಕತೆಗಳು (ಭಾಗ ೨೦೩) - ಇಸ್ತ್ರಿ ಪೆಟ್ಟಿಗೆ

ಸ್ಟೇಟಸ್ ಕತೆಗಳು (ಭಾಗ ೨೦೩) - ಇಸ್ತ್ರಿ ಪೆಟ್ಟಿಗೆ

ನನಗೆ ಒಬ್ಬನಿಂದ ಏನು ಮಾಡೋಕೆ ಸಾಧ್ಯವಿಲ್ಲ. ವಿದ್ಯುತ್ತು ರಾಯ ನನ್ನೊಳಗೆ ಸೇರಿ ಶಾಖವನ್ನು ಉತ್ಪತ್ತಿ ಮಾಡಿದಾಗ ಮಾತ್ರ ನಾನು ನೆರಿಗೆಗಳನ್ನು ನೇರ ಮಾಡುತ್ತೇನೆ, ಮುದ್ದೆಯಾಗಿರುವುದನ್ನು ಅಂದವಾಗಿಸ್ತೇನೆ. ನನ್ನಲ್ಲಿ ನನ್ನ ಉಷ್ಣವನ್ನು ನಿಯಂತ್ರಿಸುವ ಸಾಧ್ಯತೆಗಳು ಇದ್ದಾವೆ. ಹೆಚ್ಚು ಉಷ್ಣವಾದರೂ ಕಡಿಮೆ ಉಷ್ಣವಾದರೂ ನನ್ನಿಂದ ಉಪಯೋಗ ಏನು ಇಲ್ಲ, ನೋವೇ ಎಲ್ಲರಿಗೂ. ನನಗೂ ಇದುವರೆಗೂ ಇದನ್ನೆಲ್ಲಾ ನಿನಗೆ ಯಾಕೆ ಹೇಳುತ್ತೇನೆ ಅಂದ್ರೆ ನೀನು ಆಗಾಗ ಹೇಳುತ್ತಿರುತ್ತೀಯಾ ಅಲ್ವಾ? ಅನುಸರಿಸುವವರು ಯಾರಾದರೂ ಬೇಕಲ್ವಾ?" ಹೀಗೆಂದು ಇಸ್ತ್ರಿಪೆಟ್ಟಿಗೆ ಮಾತನಾಡಿದಾಗ ಅದರ  ಮಾತುಗಳಿಗೆ ನನ್ನದೇ  ಕಲ್ಪಿಸಿಕೊಂಡೆ .ನಾವು ಜೊತೆಯಾದಾಗ ಮಾತ್ರ ಅದ್ಭುತಗಳನ್ನು ಸಾಧಿಸಬಹುದು, ನಮ್ಮ ಭಾವನೆಗಳನ್ನು ನಿಯಂತ್ರಿಸುವ ಯಂತ್ರ ನಮ್ಮಲ್ಲಿರಬೇಕು. ವಿಪರೀತವಾದ ಅಹಂಕಾರ ಏನೂ ಅರಿಯದ ಮುಗ್ಧತೆ ಸದ್ಯದ ಪರಿಸ್ಥಿತಿಗೆ ಇದು ಹೊಂದಿಕೆಯಾಗುವುದಿಲ್ಲ. ನಿಮಗೂ ಬೇರೆ ಅರ್ಥ ಕಂಡಿರಬಹುದು ಕಂಡರೆ ಅಳವಡಿಸಿಕೊಳ್ಳಿ ಕಲಿಯೋದು ಸಿಕ್ಕಾಗ ಕಲಿತು ಬಿಡಬೇಕು ಅಲ್ವಾ …

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ