ಸ್ಟೇಟಸ್ ಕತೆಗಳು (ಭಾಗ ೨೧೧) - ಮಣ್ಣಿನ ಸತ್ಯ
ಮಣ್ಣು ಬಹಳ ಶಕ್ತಿಶಾಲಿ. ಎಷ್ಟೇ ಹಾರಾಟ ಹೋರಾಟಗಳು ಇದ್ದರೂ ಕೊನೆಗೊಂದು ದಿನ ಮಣ್ಣು ತನ್ನೊಳಗೆ ಕರೆಸಿಕೊಂಡು ಬಿಡುತ್ತದೆ. ಯಾವ ಬೆಳಗೆ ಯಾವ ಪೌಷ್ಟಿಕತೆ ಬೇಕು, ಎಷ್ಟು ನೀರು ತಡೆಹಿಡಿಯಬೇಕು, ಎಲ್ಲಿ ಚೆಲ್ಲಿ ಹೋಗಬೇಕು, ಯಾವುದನ್ನು ಆಶ್ರಯಿಸಬೇಕು ಹೀಗೆ ಎಲ್ಲವನ್ನು ತಿಳಿದಿರುವುದು
ಮಣ್ಣು... ನಾನು ನೆಲದ ಮೇಲಿದ್ದೇನೆ ಅನ್ನುವ ವಾಸ್ತವ ಸತ್ಯವನ್ನು ನನ್ನ ಪಾದದಡಿಗೆ ಚುಚ್ಚಿದ ಕಲ್ಲುಗಳು ಎಚ್ಚರಿಸುತ್ತದೆ. ನಿನ್ನ ಬದುಕಿನ ಭಯವನ್ನು ಆಗಾಗ ತಿಳಿಸುತ್ತಾ ಸರಿ ದಾರಿಯಲ್ಲಿ ಸಾಗಲು ಪ್ರೇರೇಪಿಸುತ್ತದೆ. ಇಂತಹ ಒಂದು ಗುಣವನ್ನು ಅಳವಡಿಸಿಕೊಳ್ಳಬೇಕು ಅನ್ನೋದು ನನ್ನ ಅಭಿಷ್ಟೆ? ಮಣ್ಣೊಳಗೆ ಮರಣಿಸಿದ ಚೈತನ್ಯಗಳ ಪ್ರಭೆಯು ಮಾನವರ ಒಳಗೆ ಚಲಿಸಲಿ. ನೆಲದ ಮೇಲೆ ಚಲಿಸುವ ಮಾನವರ ಒಳಗಿರುವ ಕಲ್ಮಶ ಮಲಿನತೆಯನ್ನು ಮಣ್ಣು ಹೀರಿಕೊಳ್ಳಬೇಕು. ಮಣ್ಣಿನ ಭಯವೂ ನಮ್ಮೊಳಗೆ ಸಣ್ಣ ಕಂಪನವನ್ನುಂಟು ಮಾಡಿದರೆ ಕೋರ್ಟಿಗೆ ಜೈಲಿಗೂ ಕೆಲಸ ಕಡಿಮೆಯಾಗುತ್ತದೆ.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ