ಸ್ಟೇಟಸ್ ಕತೆಗಳು (ಭಾಗ ೨೧೩) - ಹಾಗೆಯೇ ಉಳಿಯಲಿ…
ಮೇಲಿರೋ ಅವನು ಅದೇನು ಬಯಸುತ್ತಿದ್ದಾನೆ ಅರಿವಾಗುತ್ತಿಲ್ಲ. ಆತನ ಆಟಗಳ ಬಗ್ಗೆ ಮಾಹಿತಿಯೂ ಸಿಗುತ್ತಿಲ್ಲ. ಮಾಡಿರುವ ತಪ್ಪುಗಳ ಅರಿವಿಲ್ಲ. ಏಕೆಂದರೆ ಈಗ ಶಿಕ್ಷೆಯನ್ನ ಅನುಭವಿಸುತ್ತಿದ್ದೇವೆ. ಮಳೆರಾಯನಿಗಿಂತ ಜಾಸ್ತಿ ಬೆವರು ಸುರಿಸಿ ಗದ್ದೆಯ ಕೆಲಸದಲ್ಲಿ ದೇಹ ಬಾಗಿಸಿ ದುಡಿದು ದೇವರಿಗೆ ಪ್ರತಿಫಲ ಸಿಗುತ್ತದೆ ಅನ್ನುವಾಗ ಕಟಾವಿಗೆ ಸಿದ್ಧವಾಗಿದ್ದ ಬೆಳೆಯುವ ಬೆಳೆಯ ರಾಶಿ ಮೇಲೆ ಬೇಸಿಗೆ ಕಾಲದ ಜೋರು ಮಳೆ ಹರಿದುಬಂದಿತ್ತು. ಅನ್ನವಾಗಿ ಹೊಟ್ಟೆ ಸೇರಬೇಕಾಗಿದ್ದ ಬತ್ತವು ಚರಂಡಿಯ ಪಾಲಾಯಿತು. ರೈತನ ಅಳು ಹಾಗೆಯೇ ಭಗವಂತನಿಗೆ ತಲುಪುತ್ತಿಲ್ಲ ಅನಿಸುತ್ತಿದೆ. ಸಣ್ಣದಾಗಿ ಸುರಿದ ಜೋರು ಮಳೆಯಿಂದ ಸಮಸ್ಯೆಗಳು ಆರಂಭವಾಗಿದೆ. ಶಾಲೆಗೆ ಹೋಗುತ್ತಿದ್ದ ಮಗ ಹಳ್ಳಿಯ ಊರಿನ ಕೆಲಸಕ್ಕೆ ಸೇರಿದ. ಗೋಡೆಯಿದ್ದ ಮನೆಗೆ ಮನೆಯ ಬದಲಾಗಿ ಅಡಿಕೆ ಹಾಳೆಯಿಂದ ಭದ್ರತೆ ನೀಡಲಾರಂಭಿಸಿತು. ಹೊಟ್ಟೆಗಿಳಿಯಬೇಕಾದ್ದು ಮಾಯವಾಗಿದೆ. ಆಸೆಯಿಂದ ಕಣ್ಣುಗಳು ಕಾಯುತ್ತಿವೆ ಬದಲಾದ ಮನಸ್ಸಿಗೆ…
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ