ಸ್ಟೇಟಸ್ ಕತೆಗಳು (ಭಾಗ ೨೧೮) - ಸೃಷ್ಟಿಕರ್ತ

ಸ್ಟೇಟಸ್ ಕತೆಗಳು (ಭಾಗ ೨೧೮) - ಸೃಷ್ಟಿಕರ್ತ

ಸದಾ ಕೆಲಸದಲ್ಲಿ ತಲ್ಲೀನನಾಗಿದ್ದ ಸೃಷ್ಟಿಕರ್ತನು ಒಮ್ಮೆ ತನ್ನ ಕೆಲಸವನ್ನು ನಿಲ್ಲಿಸಿ ಸುತ್ತ ಗಮನಿಸಿದ. ಎಲ್ಲ ಸೃಷ್ಟಿಗಳು ಅವನ ಯೋಚನೆಯಂತೆ ಕಾರ್ಯನಿರ್ವಹಿಸುತ್ತಿದ್ದವು. ಅವನು ಕೊಟ್ಟ ಆದೇಶವನ್ನು ಚಾಚೂ ತಪ್ಪದೆ ಪಾಲಿಸುತ್ತಿದ್ದವು. ಕೆಲವು ತಮ್ಮದಲ್ಲದ ತಪ್ಪಿಗೆ ಅವನತಿಯ ಹಾದಿ ಹಿಡಿದಿದ್ದವು, ಬಲಿಯಾಗಿದ್ದವು. ಭಗವಂತ ಹುಡುಕುವಾಗ ಎಲ್ಲ ಕಾರಣಗಳು ಮನುಷ್ಯನ ಬುಡಕ್ಕೆ ಬಂದು ನಿಂತಿದ್ದವು. ತಾನೊಂದು ಆಲೋಚನೆಯಿಂದ ಸೃಷ್ಟಿಸಿದ ಮಾನವನನ್ನು ತದೇಕಚಿತ್ತದಿಂದ ಗಮನಿಸಿದ ಆತನೊಳಗೆ ಮೂಡಿದ ಪ್ರಶ್ನೆಯೊಂದೇ. ಈ ಮಾನವ ಜೀವರಾಶಿಗಳಲ್ಲಿ ಪ್ರತಿಯೊಬ್ಬರಲ್ಲೂ ತಲೆಗಳಿವೆ. ಅಂದರೆ ಅಷ್ಟು ಮನಸ್ಸುಗಳಿವೆ, ಆಲೋಚನೆಗಳಿವೆ. ಅಷ್ಟೂ ತಲೆಗಳಿರುವ ಜೀವಿಗಳಿಗೆ ಹೃದಯವನ್ನು ಕೊಟ್ಟು ಕಳುಹಿಸಿದ್ದೇನೆ ಅಷ್ಟೇ ಪ್ರೀತಿ ಇರಬೇಕಿತ್ತು. ಆದರೆ ಪ್ರೀತಿಯ ಕೊರತೆ ಏಕೆ ಕಾಡುತ್ತಿದೆ. ವಿವೇಚನೆ ಇರಬೇಕಾದಲ್ಲಿ ದುರಾಲೋಚನೆ, ಪ್ರೀತಿಯ ಬದಲು ದ್ವೇಷವೇ ತುಂಬಿದೆ. ಸೃಷ್ಟಿಕರ್ತ ಮತ್ತೆ ಸಂಶೋಧನೆಯಲ್ಲಿ ತೊಡಗಿದ. ಬದಲಾವಣೆ ಬೇಕಾಗಿದೆ... ಆತನಿಗೆ…

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ