ಸ್ಟೇಟಸ್ ಕತೆಗಳು (ಭಾಗ ೨೨೦) - ಮಾತು

ಸ್ಟೇಟಸ್ ಕತೆಗಳು (ಭಾಗ ೨೨೦) - ಮಾತು

ನನಗೆ ವ್ಯಕ್ತಿಯ ಕೆಲಸಗಳು ಇಷ್ಟವಾಗಲಿಲ್ಲ ಅಂದರೆ, ಅವನು ಮೋಸಗಾರ, ಲಂಪಟ ತನ್ನ ವೈಯಕ್ತಿಕ ಸಾಧನೆಗಾಗಿ ಬದುಕಿದವನು ಅವನ ಕೆಲಸಗಳಿಂದ ಯಾರಿಗೂ ಒಳಿತಾಗಲಿಲ್ಲ"

"ಸರಿ ಮಾರಾಯ, ನಿನ್ನ ಮಾತುಗಳನ್ನು ಸ್ವೀಕರಿಸುತ್ತೇನೆ ಆಂದರೆ ಆತ ಬದುಕಿದ್ದಾಗ ನೀನು ಮಾತನಾಡಿದರೆ ಸೂಕ್ತವಾಗಿತ್ತು. ಆತ ಮರಣಿಸಿದ ನಂತರ ನಿನ್ನ ವಾಕ್ಯ ಪ್ರಯೋಗಗಳು ಅರ್ಥ, ವಿಸ್ತರಣೆಗಳು ಸೂಕ್ತವಲ್ಲ. ಮರಣದ ಸಮಯ ವ್ಯಕ್ತಿ ಪ್ರಸಿದ್ಧನಾಗಿದ್ದಾನೆ, ನೀನು ನಿನ್ನ ಮಾತಿನ ಲಹರಿಯಲ್ಲಿ ಆತನ ಉಸಿರು ಇರುವವರೆಗೂ ಹೇಳಬೇಕು. ಜೀವ ಪಕ್ಷಿ ಆಗಸದ ತಾರೆಯ ನಡುವೆ ಮೂಡಲಾರಂಭಿಸಿದಾಗ. ಸುದ್ದಿ ಪ್ರಸಾರ ಒಳಿತಲ್ಲ. ಸದಾ ದ್ವೇಷಿಸುವ ಆಗ ಒಮ್ಮೆ ಕಣ್ಣೊರೆಸಿಕೊಂಡು ಕನ್ನಡಕ ಬದಲಾಯಿಸಿದಾಗ ಎಲ್ಲವೂ ಏಕ ಬಣ್ಣದಿಂದ  ಗಮನಿಸಿದಾಗ ಎಲ್ಲವೂ ಒಂದೇ ಎಂದು ಅರಿವಾಗುತ್ತದೆ. ಅಕ್ಷರ ಪ್ರೀತಿಯ ಮನುಜನೆ, ಜೀವನ ದಾರಿಯನ್ನು ಅರ್ಥೈಸಿಕೊಂಡು ಪ್ರತಿಕ್ರಿಯಿಸು. ಮೊದಲು ಎಲ್ಲವನ್ನೂ ಅರ್ಥೈಸಿಕೊಂಡಾಗ ಸಮಸ್ಯೆಗಳು ಕಡಿಮೆಯಾಗುತ್ತವೆ ಎಂಬುದು ನನ್ನ ನಂಬಿಕೆ.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ