ಸ್ಟೇಟಸ್ ಕತೆಗಳು (ಭಾಗ ೨೨೧) - ಮಾತುಕತೆ
"ಮತ್ತೆ ಲಾಕ್ಡೌನ್ ಅಂತೆ"
"ಯಾರು ಹೇಳಿದ್ದು ಹಾಗೆಲ್ಲ ಆಗೋದಿಲ್ಲಪ್ಪ"
" ಹೌದು ಮಾರಾಯ ಇವತ್ತು ಟಿವಿಯಲ್ಲಿ ಹೇಳುತ್ತಿದ್ರು"
"ಹುಂ, ಹೌದು ಧಾರವಾಡದಲ್ಲಿ ತುಂಬಾ ಕೇಸ್ ಸಿಕ್ಕಿದೆಯಂತೆ"
"ಮತ್ತೆ ಕೊರೋನವಾ?"
"ಅಲ್ಲಪ್ಪ ಇದ್ಯಾವುದು ಸ್ವಲ್ಪ ಬೇರೆ ಅಂತೆ "
"ಈಗ ಮತ್ತೆ ಲಾಕ್ಡೌನ್ ಮಾಡ್ತಾರಾ?"
"ನನಗೆ ಡೌಟ್ ಎಲೆಕ್ಷನ್ ಉಂಟಲ್ಲ, ಅದು ಮುಗಿಯುವವರೆಗೆ ಏನು ಇಲ್ಲ ಅಂತ ಕಾಣ್ತದೆ, ಆಮೇಲೆ ಏನಿದ್ರೂ ಹಾಕಬಹುದು"
"ಆಮೇಲೇನೂ ಮಾಡೋದಿಲ್ಲ ಅಂತ ನನಗನಿಸುತ್ತೆ"
"ಹುಂ, ಹೌದು ಈಗ ಎರಡು ಸಲ ಮಾಡಿಯೇ ರೇಟ್ ಜಾಸ್ತಿ ಆಗಿದೆ, ಇನ್ನೊಂದ್ಸಲ ಮಾಡಿದ್ರೆ ಬದುಕೋದು ಹೇಗೆ "
"ನನಗೆ ವ್ಯಾಕ್ಸಿನೇಷನ್ ಆಗಿದೆ ನನಗೆ ಕೊರೋನಾ ಬರ್ಲಿಕ್ಕಿಲ್ಲ"
" ಇಲ್ಲ ಮಾರಾಯ ವ್ಯಾಕ್ಸಿನ್ ಹಾಕಿಸಿಕೊಂಡವರಿಗೂ ಇದು ಬಂದಿದೆ ಅಂತೆ"
" ಮತ್ತೆ ಏನು ಮಾಡೋದು"
"ನಮ್ಮ ಜಾಗ್ರತೆ ನಮ್ಮದು, ಮುಂದೇನಾಗುತ್ತೋ ಕಾದು ನೋಡಬೇಕು. ಸರಿ ಈಗ ಮಾಸ್ಕ್ ಹಾಕೊಂಡು ಹೋಗು"
"ಸುಮ್ನೆ ಇರೋ ಮಾರಾಯ, ಮಾಸ್ಕ್ ಹಾಕ್ಕೊಂಡ್ರೆ ಉಸಿರಾಡೋಕೆ ಆಗೋದಿಲ್ಲ, ದಮ್ಮು ಕಟ್ತದೆ. ರೋಗ ಇಲ್ವಲ್ಲ. ಬರುವಾಗ ನೋಡ್ಕೊಳ್ಳೋಣ. ಬರ್ತೇನೆ"
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ