ಸ್ಟೇಟಸ್ ಕತೆಗಳು (ಭಾಗ ೨೨೪) - ಅಪ್ಪ ಹೇಳಿದ ಮಾತು

ಅಪ್ಪ ಯಾವಾಗಲೂ ಹೇಳುತ್ತಿದ್ದರು ಮೌನವಾಗಿ ಮೂಲೆಗೆ ಸರಿಬೇಡಾ. ಮಾತಾಡಿಸು ಅಂತ. ನಾನು ಎಲ್ಲರೊಂದಿಗೆ ಮಾತನಾಡುತ್ತಿದ್ದೆ. ಆದರೂ ಅಪ್ಪ ಅದನ್ನ ಒಪ್ಪಿಕೊಳ್ಳಲಿಲ್ಲ. ಇದಲ್ಲ, ಇನ್ನೂ ಮಾತನಾಡಬೇಕು ನೀನು ಅಂತಿದ್ರು. ಏನು ಅರಿವಾಗಲಿಲ್ಲ. ಕ್ಯಾಲೆಂಡರ್ ಗಳು ಬದಲಾದವು. ಅಪ್ಪನ ಮಾತು ನೆನಪಿನಲ್ಲಿತ್ತು. ಕೆಲಸ ಜಾಸ್ತಿ ಆಯ್ತು. ಜವಾಬ್ದಾರಿಗಳು ಹೆಚ್ಚಾದವು. ಮಾತು ಕಡಿಮೆಯಾಯಿತು. ಒಂದಷ್ಟು ಸಮಸ್ಯೆಗಳು ತಲೆಗೇರಿದವು. ಏನು ಮಾಡುವುದಕ್ಕೂ ತಿಳಿಲಿಲ್ಲ. ಸಂಜೆ ಅಪ್ಪನ ಮಾತು ಹೊಸತೊಂದು ಅರ್ಥವನ್ನು ತಿಳಿಸೋಕೆ ಆರಂಬಿಸಿತು. ಮಾತನಾಡುವುದೆಂದರೆ ವ್ಯಕ್ತಿಗಳ ಜೊತೆ ಮಾತ್ರವಲ್ಲಾ, ನಾವು ಅನುಭವಿಸುವ ಸಮಸ್ಯೆ, ನೋವುಗಳೊಂದಿಗೆ ಕೂಡ ಮಾತನಾಡಬೇಕು. ನಿನ್ನೊಳಗೆ ಮಾತನಾಡು, ಸಮಸ್ಯೆಗಳೊಂದಿಗೆ ಮಾತನಾಡಿದಾಗ ಅದು ನಮ್ಮ ಆತ್ಮೀಯನಾಗುತ್ತೆ, ಅದರ ಆಳ ಅಗಲಗಳು ಅರಿವಾಗುತ್ತವೆ. ಅದರ ಒಳನೋಟ ಗೊತ್ತಾಗುತ್ತದೆ. ಸಮಸ್ಯೆಯಿಂದ ದೂರ ಸರಿದು ಮೌನವಾಗಿ ನಿಂತರೆ ಅದು ಕೋಪಗೊಂಡು ಇನ್ನಷ್ಟು ಪ್ರಮಾದವನ್ನು ಮಾಡಬಹುದು. ಅದಕ್ಕಾಗಿ ಅಪ್ಪ ಹೇಳಿದ್ದು ಮಾತನಾಡು ಅಂತ. ಅಪ್ಪ ಹೇಳಿದ ಮಾತು ಸರಿ ಅಂತೀರಾ?
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ