ಸ್ಟೇಟಸ್ ಕತೆಗಳು (ಭಾಗ ೨೩೬) - ಮಾರಾಟ

ಸ್ಟೇಟಸ್ ಕತೆಗಳು (ಭಾಗ ೨೩೬) - ಮಾರಾಟ

"20.... 30..... 20...30...ಬನ್ನಿ ಸರ್ ,ಬನ್ನಿ ,ಬನ್ನಿ ಅಮ್ಮ", 

"ಇದಕ್ಕೆ ಎಷ್ಟಪ್ಪಾ"

" 20 ಸರ್"

" ಕಡಿಮೆ ಇಲ್ವಾ"

" ಇಲ್ಲ ಸರ್" 

"ಎಲ್ಲದಕ್ಕೂ ಸೇಮ್ ಅಲ್ವಾ?"

 " ಕೆಲವು 20, ಕೆಲವು 40,"

"ನಂಗೊಂದು ಮಾಲೆ ಬೇಕಿತ್ತಲ್ಲ "

"ಯಾರಿಗೆ ಸರ್"

"ಮಗಳಿಗೆ"

 "ಇದು  ತುಂಬಾ ಚೆನ್ನಾಗಿ ಕಾಣುತ್ತೆ ಸರ್"

ಮಗಳು ಇಲ್ಲಿ ಇಲ್ಲವಲ್ಲ , ಅದು ಹೇಗೆ ಹೇಳ್ತೀಯಾ"

"ಇಲ್ಲ ಸರ್, ನಿಮ್ಮ ಮುಖ ನೋಡಿದ್ರೆ ಗೊತ್ತಾಗುತ್ತೆ, ಖಂಡಿತ ನಿಮ್ಮಗಳಿಗೆ ತುಂಬಾ ಚೆನ್ನಾಗಿ ಕಾಣುತ್ತೆ ಸರ್, ಇದಕ್ಕಿಂತ ಇದು ನೋಡಿ ಸರ್, ಇದು ಹೊಸ ಡಿಸೈನ್, ತುಂಬಾ ಚೆನ್ನಾಗಿ ಕಾಣುತ್ತೆ".

" ಸರಿ ಕೊಡಪ್ಪ ,ಎಷ್ಟಾಯ್ತು "

"ಸರ್ 40"

"ಆಗ  20.. 30...ಅಂದೀ..

 ಅದು ಕಿವಿದ್ದಕ್ಕೆ ಸರ್,  ಇದು ಮಾಲೆ ಅಲ್ವಾ  40. ಮತ್ತೆ ಮಗಳಿಗೆ ಖರೀದಿಸುವಾಗ ಬೆಲೆ ನೋಡಬಾರದು ಅಲ್ವಾ ಸರ್?"

 "ಸರಿಯಪ್ಪ ಯಾವ ಊರು ನಿಮ್ಮದು" 

"ಬಾಗಲಕೋಟೆ ಸರ್" 

"ಶಾಲೆ ಹೋಗೋದಿಲ್ವಾ ?"

"ಹೋಗ್ತೇನೆ ಸರ್, ಯಾವೂರಲ್ಲಿ ಜಾತ್ರೆ ಇಲ್ಲದಿದ್ದರೆ ನಾನು ಶಾಲೆಯಲ್ಲಿ ಇರ್ತೇನೆ, ಜಾತ್ರೆ ಇದ್ರೆ ನಾನು ಜಾತ್ರೇಲಿ ಇರುತ್ತೇನೆ "

" ಮನೆಯವರೆಲ್ಲಾ ಬರ್ತೀರಾ?"

" ಇಲ್ಲ ಸರ್ ನಾನು ಅಪ್ಪ ಮಾತ್ರ ಬರ್ತೇವೆ"

" ಸರಿ ಮುಂದೇನು ಮಾಡಬೇಕು" 

"ಗೊತ್ತಿಲ್ಲ ಸರ್ ,ಏನಾದರೂ ಕೆಲಸ ಮಾಡಬೇಕು. ಆದರೆ ಈಗ ತಗೊಂಡಿರೋದು ಖಾಲಿ ಆಗಬೇಕಲ್ಲ ಸರ್. ಅಲ್ಲಿವರೆಗೂ ಇದೆ ಕೆಲಸ ಮಾಡ್ತಾ ಇರೋದು. ಜಾತ್ರೆ ದೇವರಿಗೆ ಬೇಕಿದೆಯೋ, ಇಲ್ಲೋ ,ಗೊತ್ತಿಲ್ಲ ಸರ್. ನಮ್ಮಂತವರಿಗೆ ಬೇಕೇಬೇಕು .ಜಾತ್ರೆ ಹಬ್ಬ-ಹರಿದಿನಗಳು ಹೀಗೆ ಹೆಚ್ಚಾಗಲಿ ಸರ್, ಜನ ಜಾಸ್ತಿ ದುಡಿಲಿ ಸರ್. ನಾವು ಬದುಕುತ್ತೇವೆ."

"ಬರ್ತಿನಪ್ಪ."

 ಮಗಳ್ನ ಕರ್ಕೊಂಡ್ ಬನ್ನಿ "

" ಆಯ್ತಪ್ಪ" 

ವಯಸ್ಸಿಗಿಂತ ಮೀರಿದ ಆಲೋಚನೆ. ನನ್ನನ್ನು  ಈ ವಯಸ್ಸಿನಲ್ಲಿ ಆಲೋಚಿಸಿದಾಗ ನಾಚಿಕೆ ಮನದೊಳಗೆ ಹೆಚ್ಚಾಯಿತು.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ