ಸ್ಟೇಟಸ್ ಕತೆಗಳು (ಭಾಗ ೨೩೭) - ಸಾವಿನ ಸಂಶಯ

ಸುಮ್ಮನೆ ಕುಳಿತಿದ್ದೆ, ರಾತ್ರಿ ನಿದ್ದೆ ಇರಲಿಲ್ಲ. ನನ್ನ ಮನೆಯವರನ್ನ ಮಲಗಿಸಲು ನಿದ್ದೆ ರೌಂಡಿಗ್ ಹೋಗಿತ್ತು. ನನ್ನ ಮತ್ತು ಅದರ ಭೇಟಿಗೆ ಸ್ವಲ್ಪ ಸಮಯವಿತ್ತು. ಆ ಸಮಯ ಒಂದು ಆಲೋಚನೆ ಮನಸ್ಸೊಳಗೆ ಓಡಲಾರಂಭಿಸಿದವು. ಈ ಸಾವು ಅನ್ನುವವನು ಅಂತಿಮವಾಗಿ ಮನೆಗೆ ಬಂದಾಗ ಬೆಳೆದಿರುತ್ತಾನೆ ಯಾವುದೇ ಸಂಶಯ ಭಯ ನೋವಿನಿಂದ ನಾನು ಸಾವಿನ ಜೊತೆ ಹೊರಡಬಾರದು. ಎಲ್ಲವನ್ನು ಬಿಟ್ಟು ನಿರಾತಂಕವಾಗಿ ಸಾವಿನೊಂದಿಗೆ ಹೆಜ್ಜೆ ಹಾಕಬೇಕಾದರೆ ಅದಕ್ಕೆ ಏನು ಮಾಡಬೇಕು? ನನ್ನ ಪ್ರಕಾರ ಬಂಧನಗಳ ರೆಕ್ಕೆಯನ್ನು ಮುಲಾಜಿಲ್ಲದೆ, ನಿರ್ಭಾವುಕತೆಯಿಂದ ನಮ್ಮೊಂದಿಗಿನ "ವೈರಿಗಳನ್ನ" ಅಲ್ಲೇ ಬಿಟ್ಟು ಕಾಡಿನ ಮಧ್ಯ ಎಲ್ಲವನ್ನು ಅನುಭವಿಸಿಕೊಂಡು ಏಕಾಂಗಿ ನಿಂತಿರುವ ಭವ್ಯ ಕಲ್ಲಿನ ಬಂಡೆಯಂತೆ ಸಾವಿನ ಮನೆಗೆ ಭಯವಿಲ್ಲದೆ ಹೊರಡಬಹುದು ಅಲ್ಲವೇ? ಹಾಗೆ ಹೊರಡಲು ತುಂಬಾ ತಯಾರಿ ಬೇಕು. ನಿದ್ದೆ ರಾಯ ನನ್ನ ಕೋಣೆಯೊಳಗೆ ಒಳಗೆ ಪ್ರವೇಶಿಸಿದ. ಕ್ಷಣದ ಬದುಕು. ಪ್ರತಿಕ್ಷಣವೂ ತಯಾರಿರಬೇಕು. ಭಗವಂತನ ಮನೆಯಿಂದ ಹೊರಡುವುದು ನಮ್ಮ ಕರ್ತವ್ಯ... ಅವನು ತಿಳಿಸಿದ ನಂತರವೇ ಏನಂತೀರಿ?
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ